ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸೋದರ ಸಂಸದ ಡಿ ಕೆ ಸುರೇಶ್ ಅವರ ನಿವಾಸದ ಮೇಲೆ ಇಂದು (ಸೋಮವಾರ) ಬೆಳ್ಳಂಬೆಳಗ್ಗೆ ಸಿಬಿಐ ದಾಳಿ ನಡೆಸಿದೆ.
ಸದಾಶಿವನಗರ ಮನೆ, ಕನಕಪುರ ಸೇರಿದಂತೆ ಹಲವಡೆ ಸಿಬಿಐ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ಕಳೆದೆರಡು ವರ್ಷಗಳಿಂದ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾಗುಗುತ್ತಿರುವ ಡಿಕೆ ಶಿವಕುಮಾರ್ ಕುಟುಂಬದ ಮೇಲೆ ಇದೀಗ ಸಿಬಿಐ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ.
PublicNext
05/10/2020 10:01 am