ಬೆಳಗಾವಿ: ಜನ್ಮ ದಿನದ ಮುನ್ನ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ವಿಚಾರಣೆಯ ವೇಳೆ ಜೈಲು ಸೇರಿದ ಸಚಿವ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗದೆ ಅಸಹಾಯಕರಾಗಿ ಹಿಂಡಲಗಾ ಜೈಲಿನಲ್ಲಿ ಕಣ್ಣೀರಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ದೊರೆಯದಿರುವುದಕ್ಕೆ ಬೇಸರ ಮಾಡಿಕೊಂಡಿದ್ದರು.
ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡುವಂತೆ, ಸಿಬಿಐ ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡ ಸಚಿವರ ಮನವಿಗೆ ಅಧಿಕಾರಿಗಳು ಅವಕಾಶ ಕೊಡದ ಹಿನ್ನೆಲೆಯಲ್ಲಿ ಸಚಿವರು ಬೇಸರ ಮಾಡಿಕೊಂಡಿರುವುದು ಮೂಲಗಳಿಂದ ತಿಳಿದು ಬಂದಿದೆ.
ಹುಟ್ಟುಹಬ್ಬದ ಕಾರಣದಿಂದ ಅಭಿಮಾನಿಗಳು ಬರುತ್ತಾರೆಂಬ ಸಾಧ್ಯತೆ ಇದ್ದಿದ್ದರಿಂದ ಜೈಲಿನ ಆವರಣದಲ್ಲಿ ಭದ್ರತೆ ಮಾಡಲಾಗಿತ್ತು.
ಆದರೆ, ಅಭಿಮಾನಿಗಳಾಗಲಿ, ಪಕ್ಷದ ಕಾರ್ಯಕರ್ತರಾಗಲಿ ಯಾರು ಜೈಲಿನತ್ತ ಸುಳಿದಿಲ್ಲ.
PublicNext
07/11/2020 12:33 pm