ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಷ್ಟಾಚಾರ ಮರೆತು ಯುಎಇ ಅಧ್ಯಕ್ಷರಿಂದ ಮೋದಿಗೆ ಆತ್ಮೀಯ ಸ್ವಾಗತ

ಅಬುಧಾಬಿ: ಜರ್ಮನಿಯಲ್ಲಿ ನಡೆದ G7 ಶೃಂಗ ಸಭೆ ಮುಗಿದ ಬಳಿಕ ಪ್ರಧಾನಿ ಮೋದಿ ಯುಎಇನಲ್ಲಿ 2 ದಿನ ಪ್ರವಾಸ ಕೈಗೊಂಡಿದ್ದಾರೆ.

ಇನ್ನು ಇಂದು ಪ್ರಧಾನಿ ಮೋದಿ ಯುಎಇಯ ರಾಜಧಾನಿ ಅಬುಧಾಬಿಗೆ ಬಂದಿಳಿದ್ದಿಉದ್ದಾರೆ. ಈ ವೇಳೆ ಶಿಷ್ಟಾಚಾರವನ್ನು ಬದಿಗೊತ್ತಿದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ಅವರು ಮೋದಿಯವರನ್ನು ಆಲಂಗಿಸಿ ಬರಮಾಡಿಕೊಂಡಿದ್ದಾರೆ.

ಈ ಭೇಟಿ ವೇಳೆ ಮೋದಿ ಕಳೆದ ಮೇ 13 ರಂದು ನಿಧನರಾದ ಯುಎಇ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಸಂತಾಪ ಸೂಚಿಸಲಿದ್ದಾರೆ. ಶೇಖ್ ಖಲೀಫಾ ಈ ದೇಶದ ಎರಡನೇ ಅಧ್ಯಕ್ಷರಾಗಿದ್ದರು.

ಇನ್ನು ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಕೆಲವು ಮಧ್ಯಪ್ರಾಚ್ಯ ದೇಶಗಳು ಖಂಡನೆ ವ್ಯಕ್ತಪಡಿಸಿದ್ದವು. ಕತಾರ್, ಸೌದಿ, ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶಗಳು ಭಾರತದ ವಿರುದ್ಧ ವಾಗ್ದಾಳಿ ಮಾಡಿದ್ದವು. ಇದರ ನಡುವೆ ಈಗ ನರೇಂದ್ರ ಮೋದಿ ಯುಎಇ ಪ್ರವಾಸದಲ್ಲಿದ್ದು ಭಿನ್ನಭಿಪ್ರಾಯ ಶಮನ ಮಾಡಲಿದ್ದಾರೆ.

Edited By : Nirmala Aralikatti
PublicNext

PublicNext

28/06/2022 06:43 pm

Cinque Terre

91.71 K

Cinque Terre

14

ಸಂಬಂಧಿತ ಸುದ್ದಿ