ಡೆನ್ಮಾರ್ಕ್ : ಡೆನ್ಮಾರ್ಕ್ ನಲ್ಲಿರುವ ಭಾರತೀಯ ಮೂಲದ ಸಮುದಾಯದವರು ನರೇಂದ್ರ ಮೋದಿಯನ್ನ ಆತ್ಮೀಯವಾಗಿ ಬರಮಾಡಿಕೊಂಡ ಪರಿ ಕಂಡ ಡೆನ್ಮಾರ್ಕ್ ಪ್ರಧಾನಿ ಮೆಟೆ ದಂಗಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ರನ್ನ ಈ ದೃಶ್ಯ ಆಶ್ಚರ್ಯ ಚಕಿತಗೊಳಿಸಿತ್ತು. "ಒಬ್ಬ ರಾಜಕಾರಣಿಯನ್ನ ಹೇಗೆ ಸ್ವಾಗತ ಮಾಡಬೇಕೆಂಬುದು ಭಾರತೀಯರಿಗೆ ಗೊತ್ತಿದೆ. ನೀವು ನಮ್ಮ ಡೆನ್ಮಾರ್ಕ್ ಜನತೆಗೂ ಕಲಿಸಿಕೊಡಿ" ಎಂದು ಭಾರತೀಯ ಸಮುದಾಯದವರಿಗೆ ಮೆಟೆ ಮನವಿ ಮಾಡಿದರು.
ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಮುದಾಯದವರು ನರೇಂದ್ರ ಮೋದಿ ಜೊತೆಗೆ ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡರಿಕ್ಸನ್ ಅವರನ್ನೂ ಭವ್ಯ ರೀತಿಯಲ್ಲಿ ಸ್ವಾಗತ ಮಾಡಿದರು. "ಮೋದಿ, ಮೋದಿ", "ಮೋದಿ ಹೈ ತೊ ಮುಮ್ಕೀನ್ ಹೈ" (ಮೋದಿ ಇದ್ರೆ ಸಾಧ್ಯ) ಎಂಬಿತ್ಯಾದಿ ಸ್ಲೋಗನ್ ಗಳು ಕಾರ್ಯಕ್ರಮದ ಆಡಿಟೋರಿಯಂನಲ್ಲಿ ಪ್ರತಿಧ್ವನಿಸಿದವು.
"ಡೆನ್ಮಾರ್ಕ್ ನಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಎಲ್ಲಾ ಭಾರತೀಯರೂ ಈ ದೇಶದ ಸಮಾಜಕ್ಕೆ ಸಕಾರಾತ್ಕವಾಗಿ ಕೊಡುಗೆ ನೀಡುತ್ತಿದ್ದಾರೆ. ನಿಮ್ಮೆಲ್ಲರಿಗೂ ಧನ್ಯವಾದ. ಭಾರತೀಯರು ವಿಶ್ವದಲ್ಲಿ ಎಲ್ಲೇ ಹೋಗಲಿ ತಮ್ಮ ಕರ್ಮಭೂಮಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾರೆ" ಎಂದು ಭಾರತೀಯ ಸಮುದಾಯದವರನ್ನ ಅವರು ಪ್ರಶಂಸಿಸಿದರು.
PublicNext
05/05/2022 04:04 pm