ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದೊಂದಿಗೆ ಪಾಕಿಸ್ತಾನ ಶಾಂತಿಯುತ ಮತ್ತು ಸಹಭಾಗಿತ್ವ ಬಯಸುತ್ತಿದೆ !

ನವದೆಹಲಿ: ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಝ್ ಷರೀಫ್ ಈಗ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಎರಡೂ ದೇಶದ ನಡುವಿನ ಅರ್ಥಪೂರ್ಣ ಸಂಬಂಧ ಪರವೇ ಷರೀಫ್ ಧ್ವನಿ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಕೆಳಗಿಳಿಯುತ್ತಿದ್ದಂತೇನೆ, ಶಹಬಾಝ್ ಷರೀಫ್ ಪ್ರಧಾನಿ ಆದರು. ಏಪ್ರಿಲ್-11 ರಂದು ಪ್ರಧಾನಿ ಮೋದಿ ಕೂಡ ಪಾಕ್ ಪ್ರಧಾನಿಗೆ ಶುಭ ಹಾರೈಸಿದರು.

ಇದಕ್ಕೆ ಪ್ರತಿ ಉತ್ತರದಂತೆ ಪತ್ರ ಬರೆದಿರೋ ಶಹಬಾಜ್ ಷರೀಫ್,ಕಾಶ್ಮೀರ್ ಸೇರಿದಂತೆ ಎರಡೂ ದೇಶಗಳ ನಡುವೆ ಕೆಲವು ವಿಚಾರಗಳು ಪರಿಹರಿಸಿಕೊಳ್ಳಬೇಕಿದೆ ಎಂದು ಕೋರಿದ್ದಾರೆ. ಭಾರತದ ಜೊತೆಗೆ ಶಾಂತಿಯುತ ಮತ್ತು ಸಹಭಾಗಿತ್ವವನ್ನೇ ಪಾಕಿಸ್ತಾನ ಬಯಸುತ್ತಿದೆ ಅಂತಲೇ ಶಹಬಾಝ್ ಷರೀಫ್ ಹೇಳಿದ್ದಾರೆ.

Edited By :
PublicNext

PublicNext

18/04/2022 10:36 am

Cinque Terre

39.28 K

Cinque Terre

2

ಸಂಬಂಧಿತ ಸುದ್ದಿ