ವಾಷಿಂಗ್ಟನ್: ಅಮೆರಿಕಾ ಸರ್ಕಾರ ಜಮ್ಮು ಮತ್ತು ಕಾಶ್ಮೀರ್ ವಿಚಾರದಲ್ಲಿ ಈಗೊಂದು ನಿರ್ಧಾರ ಕೈಗೊಂಡಿದೆ. ಅದನ್ನ ತನ್ನ ಪ್ರಜೆಗಳಿಗೂ ಹೇಳಿದೆ. ಏನ್ ಅದು ಅಂತಿರೋ ? ಬನ್ನಿ, ಹೇಳ್ತೀವಿ.
ಜಮ್ಮು ಮತ್ತು ಕಾಶ್ಮೀರ್ ಪ್ರವಾಸವನ್ನ ಯಾರೂ ಸದ್ಯಕ್ಕೆ ಕೈಗೊಳ್ಳಲೇಬೇಡಿ. ಅಲ್ಲಿ ಈಗ ಪರಿಸ್ಥಿತಿ ಸರಿಯಿಲ್ಲ. ಭಯೋತ್ಪಾದನೆ ಮತ್ತು ಅಪರಾಧಗಳ ಸಂಖ್ಯೆ ಅಲ್ಲಿ ಹೆಚ್ಚಾಗಿದೆ.
ಹೀಗೆ ಅಮೆರಿಕಾ ಸರ್ಕಾರ ತನ್ನ ಪ್ರಜೆಗಳಿಗೆ ಈಗಾಗಲೇ ಹೇಳಿದೆ. ಸದ್ಯದ ಸ್ಥಿತಿಯಲ್ಲಿ ಜಮ್ಮು-ಕಾಶ್ಮೀರ್-ಭಾರತ-ಪಾಕಿಸ್ತಾನ್ ಗಡಿಯ 10 ಕಿ.ಮೀ.ವ್ಯಾಪ್ತಿಯಲ್ಲಿ ಸಂಚರಿಸೋದು ಸರಿ ಅಲ್ಲವೇ ಅಲ್ಲ.ಈ ಕಾರಣಕ್ಕೇನೆ ಯಾರೂ ಜಮ್ಮು-ಕಾಶ್ಮೀರ್ ಕಡೆಗೆ ಪ್ರವಾಸ ಹೋಗಲೇಬೇಡಿ ಅಂತ ಅಮೆರಿಕಾ ತನ್ನ ಪ್ರಜೆಗೆ ಹೇಳಿದೆ.
PublicNext
31/03/2022 01:49 pm