ನವದೆಹಲಿ:ಉಕ್ರೆನ್ ಮತ್ತು ರಷ್ಯಾ ಯುದ್ಧದ ಉದ್ವಿಗ್ನತೆ ಇನ್ನೂ ಇದೆ. ಈ ಸಮಯದಲ್ಲಿಯೇ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ನಾಳೆ ಭಾರತಕ್ಕೆ ಭೇಟಿ ಕೊಡಲಿದ್ದಾರೆ.
ಭಾರತ ಮತ್ತು ರಷ್ಯಾದ ವ್ಯಾಪಾರವನ್ನ ಉತ್ತೇಜಿಸೋ ಉದ್ದೇಶದಿಂದಲೇ ರಷ್ಯಾ ವಿದೇಶಾಂಗ ಸಚಿವ ಸೆಗ್ರೆ ಲಾವ್ರೋವ್ ಭಾರತಕ್ಕೆ ಭೇಟಿಕೊಡುತ್ತಿದ್ದಾರೆ.
ಮಾರ್ಚ್-31 ರಿಂದ ಏಪ್ರಿಲ್-1 ರವರೆಗೂ ಲಾವ್ರೊವ್ ಭಾರತದಲ್ಲಿಯೇ ಇದ್ದು, ಅಧಿಕೃತವಾಗಿಯೇ ದೆಹಲಿಗೆ ಭೇಟಿಕೊಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
PublicNext
30/03/2022 09:19 pm