ಕಾಬೂಲ್ : ಸದ್ಯ ವಿಶ್ವದಲ್ಲಿ ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆದ ಯುದ್ಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಉಭಯ ದೇಶಗಳಿಗೆ ಸಲಹೆ ಕೊಟ್ಟಿದೆ.ರಷ್ಯಾ ಮತ್ತು ಉಕ್ರೇನ್ ಶಾಂತಿಯುತವಾಗಿ ತಮ್ಮ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕು ಹಿಂಸಾಚಾರವನ್ನು ತೀವ್ರಗೊಳಿಸುವ ನಿಲುವು ತೆಗೆದುಕೊಳ್ಳುವುದನ್ನು ಎಲ್ಲಾ ದೇಶಗಳು ತ್ಯಜಿಸಬೇಕಾಗಿದೆ ಎಂದು ತಾಲಿಬಾನ್ ಹೇಳಿದೆ.
ಉಕ್ರೇನ್ ನಲ್ಲಿನ ಪರಿಸ್ಥಿತಿಯನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ ನಿಕಟವಾಗಿ ಗಮನಿಸುತ್ತಿದೆ. ನಾಗರಿಕರ ಸಾವು-ನೋವುಗಳ ಸಾಧ್ಯತೆಗಳ ಬಗ್ಗೆ ಕಳವಳ ಇದೆ. ಎರಡೂ ರಾಷ್ಟ್ರಗಳು ಸಂಯಮದಿಂದ ಇರುವುದು ಒಳಿತು ಎಂದಿದೆ.ಅಫ್ಘಾನ್ ವಿದ್ಯಾರ್ಥಿಗಳು ಮತ್ತು ಉಕ್ರೇನ್ ನಲ್ಲಿರುವ ವಲಸಿಗರ ಸುರಕ್ಷತೆಗಾಗಿ ಉಕ್ರೇನ್ ಮತ್ತು ರಷ್ಯಾ ದೇಶಗಳಿಗೆ ತಾಲಿಬಾನ್ ಮನವಿ ಮಾಡಿದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ಯುಎನ್ಎಸ್ಸಿ ನಿರ್ಣಯದಿಂದ ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಕೂಡ ದೂರ ಉಳಿದಿದೆ. ಆದರೆ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ.
PublicNext
26/02/2022 03:37 pm