ವಾಷಿಂಗ್ಟನ್: ಪ್ರಧಾನಿ ಮೋದಿ ಸದ್ಯ ಅಮೆರಿಕ ಪ್ರವಾಸಲ್ಲಿದ್ದಾರೆ. ನಿನ್ನೆ ಶುಕ್ರವಾರ ಅಲ್ಲಿನ ಅಧ್ಯಕ್ಷ ಜೋ ಬೈಡನ್‌ರನ್ನು ಭೇಟಿಯಾದ ಅವರು ಜಾಗತಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಭಯೋತ್ಪಾದನೆ, ಕೋವಿಡ್ ನಿರ್ವಹಣೆ, ಅಪ್ಘನ್ ಬಿಕ್ಕಟ್ಟು, ಆಂತರಿಕ ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಬೈಡನ್ ಜೊತೆ ಮೋದಿ ಚರ್ಚಿಸಿದ್ದಾರೆ.
ಜೋ ಬೈಡೆನ್ ಭೇಟಿಗೂ ಮೊದಲು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‍ರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಕಾಶಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಮೀನಾಕರಿ ಚೆಸ್ ಬೋರ್ಡ್ ಮತ್ತು ಕಮಲ ಹ್ಯಾರೀಸ್ ಅಜ್ಜ, ತಮಿಳುನಾಡಿನ ಪಿವಿ ಗೋಪಾಲನ್‍ಗೆ ಸೇರಿದ ನೊಟಿಫಿಕೇಷನ್ ಒಂದನ್ನು ಮೋದಿ ಕಾಣಿಕೆಯಾಗಿ ನೀಡಿದ್ದರು.
ಇದೇ ವೇಳೆ ಕೊರೊನಾ ಹತ್ತಿಕ್ಕಲು ಸಹಕರಿಸಿದ ಅಮೆರಿಕಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ. ಬೈಡನ್-ಕಮಲಾ ಅವಧಿಯಲ್ಲಿ ಭಾರತ-ಅಮೆರಿಕಾ ನಡುವಣ ಸಂಬಂಧ ಇನ್ನಷ್ಟು ಗಟ್ಟಿಯಾಗುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು. ಭಾರತಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಇದೇ ವೇಳೆ ಭಾರತದ ಲಸಿಕಾ ಕಾರ್ಯಕ್ರಮ, ವ್ಯಾಕ್ಸಿನ್ ರಾಯಭಾರತ್ವವನ್ನು ಕಮಲಾ ಶ್ಲಾಘಿಸಿದರು.
PublicNext
25/09/2021 07:17 am