ಶಿವಮೊಗ್ಗ: ತಾಲಿಬಾನಿಗಳಿಗಿಂತ ಭಾರತದಲ್ಲಿರುವ ಅವರ ಬೆಂಬಲಿಗರು ಬಹಳ ಡೇಂಜರ್ ಎಂದು ಚಕ್ರವರ್ತಿ ಸೂಲಿಬೆಲೆ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿದರೆ ಇದು ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತಿಗೆ ಭಯಾನಕ ಸಂಗತಿಯಾಗಿದೆ. ಇಸ್ಲಾಂ ಉಗ್ರವಾದಿಗಳು ಕೇವಲ ಭಾರತ, ಚೀನಾ, ರಷ್ಯಾದಲ್ಲಿ ಇಲ್ಲ. ಬದಲಿಗೆ ಯುರೋಪಿಯನ್ ಯೂನಿಯನ್‍ನಲ್ಲೂ ಇದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡಿರುವುದು ಜಗತ್ತಿನ ಮೂಲೆ ಮೂಲೆಯಲ್ಲಿ ಇರುವ ಉಗ್ರವಾದಿಗಳಿಗೆ ಜೀವ ಬಂದಂತಾಗಿದೆ" ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
"ಭಾರತದಲ್ಲಿ ಇಸ್ಲಾಂ ಉಗ್ರವಾದಿಗಳಿಗೆ ಏನು ಕೊರತೆ ಇಲ್ಲ. ಭಾರತದಲ್ಲಿ ಜಿಹಾದಿಗಳದ್ದು ಅಷ್ಟೇ ಸಮಸ್ಯೆ ಇಲ್ಲ. ಧರ್ಮ ಪ್ರಚಾರಕರು, ಮಾಹೋವಾದಿಗಳ ಸಮಸ್ಯೆ ಸಹ ಇದೆ. ಈ ಮೂವರು ಒಟ್ಟಾಗಿ ಇರುವುದರಿಂದ ಸಮಸ್ಯೆ ಕಾಡುತ್ತದೆ. ಈ ಭಯೋತ್ಪಾದಕ ಸಂಘಟನೆಗಳನ್ನು ಎದುರಿಸುವ ಕೆಲಸವನ್ನು ಕೇವಲ ಪ್ರಧಾನ ಮಂತ್ರಿ ಅಥವಾ ಮಂತ್ರಿಗಳು ಅಷ್ಟೇ ಮಾಡದೇ, ಇಡೀ ದೇಶದ ಜನತೆ ಇದರ ವಿರುದ್ಧ ಜಾಗೃತರಾಗಿ ಎದುರಿಸಬೇಕಿದೆ. ಹೀಗಾಗಿಯೇ ತಾಲಿಬಾನಿಗಳಿಗೆ ಭಯ ಪಡುವುದಕ್ಕಿಂತ, ಭಾರತದಲ್ಲಿರುವ ತಾಲಿಬಾನಿಗಳಿಗೆ ಬೆಂಬಲಿಸುವವರಿಗೆ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
PublicNext
18/08/2021 10:21 pm