ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಭಾರತೀಯ ಕಲೆಯ ರಂಗು… ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಕೋಲಂ ಮೆರಗು

ವಾಷಿಂಗ್ ಟನ್: ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಅತ್ಯಂತ ಹಿಂಸಾಚಾರ ರೂಪ ಪಡೆದಿತ್ತು.ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಕೃತ್ಯ ಅಮೆರಿಕಾದ ಕರಾಳ ದಿನಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಸದ್ಯ ಎಲ್ಲ ಅಡೆತಡೆಗಳನ್ನು ದಾಟಿ ಅಮೆರಿಕದ 2020 ರ ಅಧ್ಯಕ್ಷೀಯ ಚುನಾವಣೆ ಹಾಗೂ ಚುನವಣೋತ್ತರ ನಡೆದ ಹಲವು ಬೆಳವಣಿಗೆಗಳು ಭಾರತೀಯ ಸಮುದಾಯದೊಂದಿಗೆ ಮಹತ್ವದ ನಂಟು ಹೊಂದಿದೆ. ಇದು ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲೂ ಮುಂದುವರೆಯಲಿದೆ.

ಭಾರತೀಯ ಸಂಪ್ರದಾಯದ ಭಾಗವಾಗಿರುವ ಕೋಲಂ ಅಥವಾ (ರಂಗೋಲಿ) ಕಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷ್ಯೆ, ಭಾರತೀಯ ಮೂಲದವರೂ ಆಗಿರುವ ಕಮಲಾ ಹ್ಯಾರಿಸ್ ಪದಗ್ರಹಣ ಸಮಾರಂಭದಲ್ಲಿ ಶ್ವೇತ ಭವನದಲ್ಲಿ ರಾರಾಜಿಸಲಿದ್ದು ಹೊಸ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಕೋಲಂ ಸ್ವಾಗತಿಸಲಿವೆ.

ಈ ಐತಿಹಾಸಿಕ ಸಮಾರಂಭವನ್ನು ಸಂಭ್ರಮಿಸುವುದಕ್ಕಾಗಿ ಬಿಡಿಸಲಾಗುವ ಕೋಲಂ ಕಲೆಗಾಗಿ ಈಗಾಗಲೇ ಪೂರ್ವಭಾವಿ ತಯಾರಿಗಳಾಗಿದ್ದು, ಶ್ವೇತ ಭವನದ ಟೈಲ್ ಗಳ ಮೇಲೆ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಭಾರತೀಯ ಮೂಲದವರೂ ಸೇರಿ ಒಟ್ಟಾರೆ 1,800 ಮಂದಿ ಭಾಗಿಯಾಗಿದ್ದರು.

ಹಲವು ಮಂದಿ ಕೋಲಂ (ರಂಗೋಲಿ)ಯನ್ನು ಹೊಸ ಆರಂಭದ, ಸಕಾರಾತ್ಮಕ ಶಕ್ತಿಯ ಪ್ರತೀಕ ಎಂದು ಭಾವಿಸಿದ್ದಾರೆ.

Edited By : Nirmala Aralikatti
PublicNext

PublicNext

17/01/2021 11:58 am

Cinque Terre

85.21 K

Cinque Terre

1

ಸಂಬಂಧಿತ ಸುದ್ದಿ