ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಗುಡುಗಿದ್ದಾರೆ.
ಈ ಬಗ್ಗೆ ಸುದೀರ್ಘ ಪತ್ರವನ್ನು ಟ್ವೀಟ್ ಮಾಡಿರುವ ಒಬಾಮಾ, "ಅಮೆರಿಕದ ಕ್ಯಾಪಿಟಲ್ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಇಂದಿನ ಹಿಂಸಾಚಾರವನ್ನು ಇತಿಹಾಸವು ಸರಿಯಾಗಿ ನೆನಪಿಸಿಕೊಳ್ಳುತ್ತದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಅವರು ಕಾನೂನುಬದ್ಧ ಚುನಾವಣೆಯ ಫಲಿತಾಂಶದ ಬಗ್ಗೆ ಆಧಾರರಹಿತವಾಗಿ ಸುಳ್ಳು ಹೇಳುತ್ತಿದ್ದಾರೆ. ಇದು ನಮ್ಮ ರಾಷ್ಟ್ರಕ್ಕೆ ಅಪಮಾನ ಮತ್ತು ಅವಮಾನದ ಕ್ಷಣವಾಗಿದೆ'' ಅಸಮಾಧಾನ ಹೊರ ಹಾಕಿದ್ದಾರೆ.
ನವೆಂಬರ್ 3 ಚುನಾವಣೆಯ ಫಲಿತಾಂಶದ ಬಗ್ಗೆ ನಿರಂತರವಾಗಿ ಸುಳ್ಳು ಹೇಳುತ್ತಾ ದೇಶದಲ್ಲಿ ಹಿಂಸಾಚಾರ ಪ್ರಚೋದಿಸುತ್ತಿದ್ದಾರೆ. ರಿಪಬ್ಲಿಕನ್ ನಾಯಕರು ತಮ್ಮ ಬೆಂಬಲಿಗರಿಗೆ ಚುನಾವಣೆಯ ಬಗ್ಗೆ ಸತ್ಯ ಹೇಳಲು ಇಷ್ಟ ಪಡುವುದಿಲ್ಲ ಎಂದು ಒಬಾಮ ಆರೋಪಿಸಿದ್ದಾರೆ.
PublicNext
07/01/2021 11:06 am