ವಾಷಿಂಗ್ಟನ್: ಅಮೆರಿಕದ ನಾಯಕರೊಂದಿಗೆ ಸ್ನೇಹ, ದೈಹಿಕ ಸಂಪರ್ಕ ಹೊಂದಿ ಯುವತಿಯೊಬ್ಬಳು ಮಾಹಿತಿ ಕದ್ದು, ಚೀನಾಕ್ಕೆ ಬೇಹುಗಾರಿಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಚೀನಾ ಮೂಲದ ಫಾಂಗ್ ಫಾಂಗ್ ಅಥವಾ ಕ್ರಿಸ್ಟೀನ್ ಫಾಂಗ್ ಹೆಸರಿನಿಂದ ಅಮೆರಿಕದಲ್ಲಿ 2011ರಿಂದ 2015ರವರೆಗೆ ವಾಸವಿದ್ದಳು. ಈ ಸಮಯದಲ್ಲಿ ಫಾಂಗ್ ಫಾಂಗ್ ಸಾಕಷ್ಟು ರಾಜಕೀಯ ನಾಯಕರ ಪರಿಚಯ ಮಾಡಿಕೊಂಡಿದ್ದಳು. ಅಷ್ಟೇ ಅಲ್ಲದೆ ಕೆಲವು ಚುನಾವಣೆಗಳ ಪ್ರಚಾರದಲ್ಲೂ ಭಾಗವಹಿಸಿದ್ದಳು ಹಾಗೂ ಇಬ್ಬರು ನಾಯಕರೊಂದಿಗೆ ದೈಹಿಕ ಸಂಬಂಧವನ್ನೂ ಹೊಂದಿದ್ದಳು ಎನ್ನುವುದು ತಿಳಿದು ಬಂದಿದೆ.
ಸಂಯುಕ್ತ ತನಿಖಾ ದಳ (ಎಫ್‌ಬಿಐ) ಬೇಹುಗಾರಿಕೆಯ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ಫಾಂಗ್ ಫಾಂಗ್ ವಿಚಾರ ತಿಳಿದುಬಂದಿದೆ. ಆಕೆಯು ಅಮೆರಿಕದ ಗೌಪ್ಯ ಮಾಹಿತಿಯನ್ನು ಚೀನಾಕ್ಕೆ ಬೇಹುಗಾರಿಕೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಳು. 2015ರಲ್ಲಿ ತನ್ನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಅಮೆರಿಕದಿಂದ ಕಾಲ್ಕಿತ್ತಿದ್ದಾಳೆ ಎನ್ನಲಾಗಿದೆ.
PublicNext
08/12/2020 10:00 pm