ಬೆಂಗಳೂರು : ಮುಂಬುರುವ ವರ್ಷ ಆರಂಭಗೊಳ್ಳಲಿರುವ, ಬೆಂಗಳೂರು ಹುಬ್ಬಳ್ಳಿ ನಡುವಿನ ವಂದೇ ಭಾರತ್ ಹೈ ಸ್ಪೀಡ್ ರೈಲು ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದೆ ಎಂದು ತಿಳಿದು ಬಂದಿವೆ.
ಹೌದು ! ಸದ್ಯಕ್ಕೆ ಸಾಮಾನ್ಯ ಪ್ಯಾಸೆಂಜರ್ ರೈಲಿನಲ್ಲಿ ಬೆಂಗಳೂರು ಹುಬ್ಬಳ್ಳಿ ಎರಡೂ ನಗರಗಳ ನಡುವಿನ ಸಂಚಾರಕ್ಕೆ 7 ಗಂಟೆ ಬೇಕು. ಆದ್ರೇ ಹೈ ಸ್ಪೀಡ್ ರೈಲಿನಲ್ಲಿ ನಾಲ್ಕು ಗಂಟೆಗಳಲ್ಲಿ ಈ ಎರಡೂ ನಗರಗಳ ನಡುವೆ ರೈಲು ಸಂಚಾರ ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ವಿಜೇಯೇಂದ್ರ ಯಡಿಯೂರಪ್ಪ ಟ್ವೀಟ್ ಮಾಡಿ ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಹೈ ಸ್ಪೀಡ್ ರೈಲನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾರ್ಚ್ 2023 ರೊಳಗೆ ಪಡೆಯಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಸರ್ಕಾರವು ಹಿಂದೆಂದಿಗಿಂತಲೂ ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಮುಂದಾಗಿದೆ. ಇವು ಭಾರತೀಯ ಮೂಲ ಸೌಕರ್ಯವು ಹೇಗೆ ರೂಪಾಂತರಗೊಳ್ಳುತ್ತಿದೆ ಎಂಬುದರ ಸಾಂಕೇತಿಕ ಸೂಚನೆಗಳಾಗಿವೆ ಎಂದು ಟ್ವೀಟ್ ಮಾಡಿ ಹೈ ಸ್ಪೀಡ್ ರೈಲ್ವೆ ಪೋಟೋ ಸಹ ಟ್ವಿಟರ್'ನಲ್ಲಿ ಹಂಚಿಕೊಂಡಿದ್ದಾರೆ.
ಈ ಟ್ವಿಟ್ 49 ಬಾರಿ ರೀ ಟ್ವಿಟ್ ಆಗಿದ್ದು, ಅನೇಕರಿಂದ ಲೈಕ್ ಸಹ ಪಡೆದಿದೆ.
PublicNext
07/10/2022 12:42 pm