ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬುಗುಡನಹಳ್ಳಿ ಹಿನ್ನೀರಿನಿಂದಾಗಿ ಸಮಸ್ಯೆಗೆ ಸಿಲುಕಿದ್ದ ರೈತಾಪಿ ವರ್ಗದವರಿಗೆ ಶಾಸಕ ಡಿ.ಸಿ. ಗೌರೀಶಂಕರ್ ಧ್ವನಿಯಾಗಿ ನಿಂತು 40 ವರ್ಷದ ಇತಿಹಾಸದಲ್ಲಿ ಬುಗುಡನಹಳ್ಳಿ ಕೆರೆಯ ಗೇಟ್ ತೆರೆಯದೇ ಅವ್ಯವಸ್ಥೆಯ ನಡೆಯನ್ನು ಖಂಡಿಸಿ ತಾವೇ ಸ್ವತಃ ಕೆರೆ ಗೇಟ್ ತೆಗೆದು ಭ್ರಷ್ಟ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ.
ಬುಗುಡನಹಳ್ಳಿ ಕೆರೆ ತುಂಬಿ ಹಿನ್ನೀರಿಗೆ ಒಳಪಟ್ಟಿದ್ದ 300 ಎಕರೆಗೂ ಹೆಚ್ಚು ಅಡಿಕೆ, ತೆಂಗು ಜಮೀನಿನ ಬೆಳೆ ಹಾನಿಯಾಗಿತ್ತು. 70ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಕ್ಕಪಕ್ಕದ ಗ್ರಾಮಗಳಾದ ನರಸಾಪುರ ಇನ್ನೂ ಹಲವಾರು ಹಳ್ಳಿಗಳ ರೈತರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಶಾಸಕರೇ ಆ.1ರಂದು ಖುದ್ದು ಸ್ಥಳಕ್ಕೆ ಅಧಿಕಾರಿಗಳ ಸಮೇತ ಭೇಟಿ ನೀಡಿ ಸಭೆ ಕರೆದು ತ್ವರಿತವಾಗಿ ಕೆರೆಯಿಂದ ನೀರೆತ್ತುವಂತೆ ಆದೇಶ ನೀಡಿದ್ದರು. ಶಾಸಕರ ಆದೇಶಕ್ಕೆ ಅಧಿಕಾರಿಗಳು ಸ್ಪಂದಿಸದೆ ಬೇಜವಾಬ್ದಾರಿ ತೋರಿದ ಕಾರಣ ಇಂದು ಶಾಸಕ ಗೌರಿಶಂಕರ್ ಅವರೇ ಖುದ್ದು ಸ್ಥಳಕ್ಕೆ ಆಗಮಿಸಿ ಗೇಟ್ ತೆಗೆದು ದಶಕಗಳ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.
ಈ ವೇಳೆ ಬೆಳಗುಂಬ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಹಾಗೂ ಜೆಡಿಎಸ್ ಯುವ ಮುಖಂಡ ನರಸಾಪುರ ಹರೀಶ, ಗ್ರಾಮ ಪಂಚಾಯ್ತಿ ಸದಸ್ಯರಾದ ಚಂದ್ರಪ್ಪ, ಶಿವಕುಮಾರ್, ಮಾಜಿ ಎಪಿಎಂಸಿ ಅಧ್ಯಕ್ಷ ಬೋವಿಪಾಳ್ಯ ಉಮೇಶ್, ಜೆಡಿಎಸ್ ಮುಖಂಡ ಶ್ರೀನಾಥ್, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ತೋಪೇಗೌಡ, ಕೃಷ್ಣಮೂರ್ತಿ, ಲಕ್ಷ್ಮಯ್ಯ, ಶಿವಕುಮಾರ್, ಯತೀಶ್, ನವೀನ್ ಕುಮಾರ್, ಉಮಾಶಂಕರ್ ಹಾಗೂ ನರಸಾಪುರ, ಬುಗುಡನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
PublicNext
03/08/2022 08:34 pm