ಹೊಸ ವರ್ಷದ ಪ್ರಯುಕ್ತ ಅದಾನಿ ಗ್ರೂಪ್ಸ್‌ಗೆ ಭಾರತದ ಪ್ರಧಾನಿ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದ್ದು, ಒಪ್ಪಂದದಂತೆ ಭಾರತದ ವಿಮಾನ ನಿಲ್ದಾಣಗಳನ್ನು ಐವತ್ತು ವರ್ಷಗಳ ಕಾಲ ಅದಾನಿ ಗ್ರೂಪ್ಸ್‌ಗೆ ವಹಿಸಲಾಗುತ್ತಿದೆ. ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಮುಂದಿನ ತಿಂಗಳು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಸಹಿ ಹಾಕಲಿದೆ. ಈ ಹಿಂದೆ ಮಂಗಳೂರು, ಲಕ್ನೋ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳನ್ನು ಅದಾನಿಗೆ ಹಸ್ತಾಂತರಿಸಲಾಗಿತ್ತು.
ಆರು ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಕಾಲ Purchasing Power Parity (PPP) ಆಧಾರದ ಮೇಲೆ ಮುನ್ನಡೆಸಲು ಅದಾನಿ ಗ್ರೂಪ್ಸ್ ಬಿಡ್ ಪಡೆದುಕೊಂಡಿದೆ.
2021 ಜನವರಿ 25 ರೊಳಗೆ ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಉಳಿದ ಮೂರೂ ವಿಮಾನ ನಿಲ್ದಾಣಗಳನ್ನೂ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಎಂದು AAI ಅಧ್ಯಕ್ಷ ಅರವಿಂದ್ ಸಿಂಗ್ ಖಚಿತಪಡಿಸಿದ್ದಾರೆ.
PublicNext
01/01/2021 04:17 pm