ಬೆಂಗಳೂರು: ಹನುಮನ ಜನ್ಮ ಸ್ಥಳ ಕರ್ನಾಟಕನಾ? ಮಹಾರಾಷ್ಟ್ರ ದ ನಾಸಿಕ್‌ನಲ್ಲಿರುವ ಅಂಜನೇರಿನಾ.? ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿದೆ. ಕೊಪ್ಪಳ ಪ್ರದೇಶದ ಕಿಷ್ಕಿಂಧೆ ಹನುಮ ಜನ್ಮ ಭೂಮಿ ಎಂದು ಪುರಾಣದಲ್ಲೆ ಪುರಾವೆಗಳಿವೆ. ಆದ್ರೆ ಹನುಮನ ಜನ್ಮ ಸ್ಥಳ ಕುರಿತು ಹಿಂದೆ ಟಿಟಿಡಿ ಸಂಸ್ಥೆ ಕ್ಯಾತೆ ತೆಗೆದು ಅವಮಾನಕ್ಕೆ ಈಡಾಗಿತ್ತು. ಆದ್ರೆ ಈಗ ನೆರೆ ರಾಜ್ಯ ಮಹಾರಾಷ್ಟ್ರ ಆಂಜನೇಯ ನಮ್ಮ ಅಂಜನೇರಿಯಲ್ಲೆ ಹುಟ್ಟಿದ್ದು ಎಂದು ಪ್ರತಿಪಾದಿಸುತ್ತಿದೆ.
ಇನ್ನು 2 ವರ್ಷದಿಂದ ವಿವಾದದಲ್ಲಿರುವ ಹನುಮನ ಜನ್ಮ ಸ್ಥಳದ ವಿವಾದಗಳು ಹಲವಾರು ತಿರುವುಗಳನ್ನ ಪಡೆದುಕೊಳ್ತಿದೆ.. ಮತ್ತು ಜನರಲ್ಲಿ ಒಂದು ತರಹದ ಆತಂಕವನ್ನೂ ಸೃಷ್ಟಿ ಮಾಡ್ತಿದೆ. ಮೊದಲಿಗೆ ತಿರುಮಲ ಹುಟ್ಟಿದ ತಿರುಪತಿಯಲ್ಲೆ ಅಂಜನಿಪುತ್ರ ಹುಟ್ಟಿದ್ದು ಅಂತ ಟಿಟಿಡಿ ಸಂಸ್ಥೆ ಹೇಳುತ್ತಿದೆ. ಮತ್ತೊಂದು ಕಡೆ ಆಂಜನೇಯ ಹುಟ್ಟಿದ್ದು ನಮ್ಮ ಮಹಾರಾಷ್ಟ್ರದ ಅಂಜನೇರಿಯಲ್ಲಿ ಎಂದು ಮಹಾರಾಷ್ಟ್ರ ಹೇಳುತ್ತಿದೆ.
ಒಟ್ನಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಅಂಜನಿ, ಹನುಮಂತನಿಗೆ ಜನ್ಮ ನೀಡಿರುವ ಬಗ್ಗೆ ದಾಖಲೆಗಳ ಪುರಾವೆ ಇದ್ದರೂ ಕೂಡ ಈ ವಿವಾದಗಳು ಸೃಷ್ಟಿಯಾಗುತ್ತಿರುವುದು ಆತಂಕಕಾರಿ ವಿಷಯ. ಇದರ ಬಗ್ಗೆ ಇಂದು ಈಗ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ನಾಸಿಕ್‌ನ ಧರ್ಮ ಸಂಸದ್‌ನಲ್ಲಿ ಚರ್ಚೆ ನಡೆಯಲಿದೆ. ಹನುಮನ ಜನ್ಮ ಸ್ಥಳ ಯಾವುದು ಎಂಬ ಬಗ್ಗೆ ಅಲ್ಲಿ ತಿಳಿಯಲಿದೆ. ಈ ವಿವಾದ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದು ಕುತೂಹಲಕಾರಿಯಾಗಿದೆ. ಈ ಬಗ್ಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದೇನು? ಕೇಳೋಣ ಬನ್ನಿ
PublicNext
31/05/2022 01:28 pm