ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಎಂಟು-ಹತ್ತು ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದೇನೆ. ಈಗಾಗಲೇ ಇರುವ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಏನಿದೆ ಎಂಬುದರ ಬಗ್ಗೆ ವರದಿಯನ್ನ ಪಡೆಯಲಿದ್ದೇನೆ. ಬಳಿಕ ಕೂಡಲೇ ತೀರ್ಮಾನ ಕೈಗೊಳ್ಳಲಿದ್ದೇನೆ.
ಜನರ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಭಟ್ಕಳದಲ್ಲಿ ಈ ಬಗ್ಗೆ ಮಾತನಾಡುತ್ತಾ, ವೈದ್ಯರ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯರಿಗೆ ಪೋಸ್ಟಿಂಗ್ ಮಾಡಿದರೂ ಇಲ್ಲಿರದೆ ಬೇರೆ ಹೋಗುವ ಪ್ರವೃತ್ತಿ ಇದೆ.
ಹೀಗಾಗಿ ಈ ಬಗ್ಗೆ ವಿಶೇಷ ಆದೇಶವೊಂದನ್ನು ಮಾಡಲಿದ್ದೇನೆ. ಹಂತಹಂತವಾಗಿ ವೈದ್ಯರುಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆದರೆ ತಜ್ಞರನ್ನ ಇಲ್ಲಿ ನೇಮಕ ಮಾಡಲಾಗುತ್ತದೆ ಎಂದರು.
PublicNext
04/08/2022 06:53 pm