ಬೆಂಗಳೂರು: ದಸರಾ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೇನು ದಸರಾ ಹಬ್ಬ ಹತ್ರ ಬರುತ್ತಿದೆ. ಮಕ್ಕಳಿಗೂ ಸಹ ದಸರಾ ರಜೆ ಇದೆ. ಹೀಗಾಗಿ ನಗರದಲ್ಲಿ ಇದ್ದ ಜನರು ಊರಿಗಳಿಗೆ ಹೋಗುವ ಪ್ಲಾನ್ ಮಾಡುತ್ತಿರುತ್ತಾರೆ. ಹೀಗಿರುವಾಗ ಸಾಮಾನ್ಯವಾಗಿ ಹಬ್ಬದಿನಗಳಲ್ಲಿ ಬಸ್ ದರ ಹೆಚ್ಚಳವಾಗುತ್ತದೆ. ಆದರೆ ಈ ಬಾರಿ ಹಬ್ಬದ ದಿನದಲ್ಲಿ ಸರ್ಕಾರಿ ಬಸ್ ಗಳು ಸೇರಿ ಯಾವುದೇ ಬಸ್‌ಗಳ ಪ್ರಯಾಣ ದರ ಹೆಚ್ಚಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳ ಮಾಡದಿರಲು ಸಾರಿಗೆ ನಿಗಮಗಳಿಗೆ ಸೂಚನೆ ನೀಡಿದ್ದು, ಖಾಸಗಿ ಟ್ರಾವೆಲ್ಸ್ ಈ ನಿರ್ದೇಶನ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
PublicNext
25/09/2022 08:36 am