ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೌತಿ ಖಾತೆ ಅಭಿಯಾನ ಗ್ರಾಮೀಣ ಜನರಿಗೆ ವರದಾನ

ಬೆಂಗಳೂರು: ಜೂನ್ 23 ಸರ್ಕಾರದ ವಿವಿಧ ಇಲಾಖೆಗಳ ಪೈಕಿ ಕಂದಾಯ ಇಲಾಖೆಯನ್ನು ಮಾತೃಇಲಾಖೆ ಎಂದು ಕರೆಯಲಾಗುತ್ತದೆ.

ಕಾರಣ ಸರ್ಕಾರದ ಆಡಳಿತ ಯಂತ್ರದ ಪ್ರಮುಖ ಭಾಗಗಳಾದ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಳು, ರಿಜಿಸ್ಟ್ರಾರ್ ಗಳು, ಎಸಿ ಯವರು ಸೇರಿದಂತೆ ಪ್ರಮುಖ ಅಧಿಕಾರಿಗಳೆಲ್ಲರೂ ಕಂದಾಯ ಇಲಾಖೆ ಅಡಿಯಲ್ಲೇ ಬರುತ್ತಾರೆ.

ಜೊತೆಗೆ ಭೂ ಖರೀದಿ, ಮಾರಾಟ, ಖಾತೆ, ನಕ್ಷೆ, ಸರ್ವೆ ಎಲ್ಲವೂ ಕಂದಾಯ ಇಲಾಖೆ ಅಡಿಯಲ್ಲೇ ಬರುತ್ತವೆ. ಗ್ರಾಮೀಣ ಭಾಗಗಳಲ್ಲಂತೂ ರೈತರು, ಜನಸಾಮಾನ್ಯರು ಒಂದಿಲ್ಲೊಂದು ಕಾರಣಗಳಿಗಾಗಿ ಕಂದಾಯ ಇಲಾಖೆ ಕಚೇರಿಗೆ ಪ್ರತೀದಿನ ಎಡತಾಕುತ್ತಲೇ ಇರುತ್ತಾರೆ.

ಹೀಗಾಗಿ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.."ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ" ಎಂಬ ಯೋಜನೆ ಈಗಾಗಲೇ ಅತ್ಯಂತ ಯಶಸ್ಸನ್ನು ಗಳಿಸಿದೆ.

ಇದರ ಮುಂದುವರೆದ ಭಾಗವಾಗಿ ಪೌತಿ ಖಾತೆ ಅಭಿಯಾನ ಎಂಬ ಕಾರ್ಯಕ್ರಮವನ್ನು ಮುಂದಿನ ತಿಂಗಳು 15 ನೇ ತಾರೀಕಿನಿಂದ ಹಮ್ಮಿ ಕೊಂಡಿದೆ ಆ ಯೋಜನೆಯ ಕುರಿತಾದ ಸಮಗ್ರ ಮಾಹಿತಿ ಜೊತೆಗೆ ಸಚಿವ ಆರ್ ಅಶೋಕ್ ಅವರ ಕಿರುಸಂದರ್ಶನ ಇಲ್ಲಿದೆ..

-ಪ್ರವೀಣ್ ರಾವ್

Edited By : Somashekar
PublicNext

PublicNext

23/06/2022 07:51 pm

Cinque Terre

68.13 K

Cinque Terre

5

ಸಂಬಂಧಿತ ಸುದ್ದಿ