ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಾಡಿ ಘಟ್ಟದಲ್ಲಿ 26 ಕಿಮಿ ಸುರಂಗ ಮಾರ್ಗ: ಸದಾನಂದಗೌಡ

ಮಂಗಳೂರು:ಕೇಂದ್ರ ಸರ್ಕಾರ ಶಿರಾಡಿ ಘಟ್ಟದಲ್ಲಿ 26 ಕಿಮಿ ಸುರಂಗ ಮಾರ್ಗ ನಿರ್ಮಿಸಲಿದೆ. ಇದರಲ್ಲಿ ಅತ್ಯಂತ ಎತ್ತರವಾದ 1.5 ಕಿಮಿ ಸೇತುವೆ ಮತ್ತು 6 ಸುರಂಗಗಳು (ಒಟ್ಟು 12.6 ಕಿಮಿ) ಇರಲಿವೆ. ಅಂದಾಜು ವೆಚ್ಚ 10,000 ಕೋಟಿ ರೂ. ಇದು ಸಿದ್ಧಗೊಂಡ ನಂತರ 4ರಿಂದ 5 ಗಂಟೆಯ ಒಳಗಾಗಿ ಬೆಂಗಳೂರಿನಿಂದ ಮಂಗಳೂರು ತಲುಪಬಹುದು.

ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ರಾಜ್ಯದ ಬೃಹತ್ ನಗರಗಳಾದ ಬೆಂಗಳೂರು ಹಾಗೂ ಮಂಗಳೂರು ನಡುವೆ ಈ ಸುರಂಗ ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಈ ಭಾಗದ ವ್ಯಾಪಾರ-ವ್ಯವಹಾರ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಮೂರು ಘಟ್ಟಗಳನ್ನು ಈ ಸುರಂಗ ಮಾರ್ಗ ಹಾಯ್ದು ಹೋಗಲಿದೆ ಎಂದರು.

Edited By : Nagaraj Tulugeri
PublicNext

PublicNext

20/12/2020 10:31 am

Cinque Terre

120.62 K

Cinque Terre

4

ಸಂಬಂಧಿತ ಸುದ್ದಿ