ನವದೆಹಲಿ- ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಸಂಸತ್ ಭವನದ ಕಾಮಗಾರಿ 2022ರ ಅಕ್ಟೋಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಂಪೂರ್ಣ ಕಾಗದ ರಹಿತ ಡಿಜಿಟಲ್ ಸಂವಹನಕ್ಕಾಗಿ ಸಕಲ ಮೂಲಸೌಕರ್ಯಗಳನ್ನು ಈ ಭವನ ಹೊಂದಲಿದೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಶುಕ್ರವಾರ ಹೊಸ ಕಟ್ಟಡ ಕುರಿತು ಪರಿಶೀಲನಾ ಸಭೆ ನಡೆಸಿದರು. ಕಾಮಗಾರಿ ಗುಣಮಟ್ಟ ಉತ್ತಮವಾಗಿರಬೇಕು ಹಾಗೂ ಕಾಲಮಿತಿಯಲ್ಲಿ ಕೆಲಸ ಮುಗಿಯಬೇಕು ಎಂದು ಸೂಚಿಸಿದ್ದಾರೆ.
ಹೊಸ ಕಟ್ಟಡದಲ್ಲಿ ಉಭಯ ಸದನಗಳ ಸಭಾಂಗಣ ಇರಲಿದೆ. ಜೊತೆಗೆ ಭವಿಷ್ಯದ ದೃಷ್ಟಿಯಿಂದ 888 ಸದಸ್ಯರಿಗೆ ಆಸನ ವ್ಯವಸ್ಥೆ ಒದಗಿಸುವಷ್ಟು ಲೋಕಸಭೆ ವಿಶಾಲವಾಗಿ ನಿರ್ಮಿತವಾಗಲಿದೆ. ಜೊತೆಗೆ ಪ್ರತಿ ಸದಸ್ಯರಿಗೂ ಪ್ರತ್ಯೇಕ ಕೋಣೆ, ಗ್ರಂಥಾಲಯ, ಕಾನ್ಸ್ಟಿಟ್ಯೂಷನಲ್ ಹಾಲ್, ಗ್ರಂಥಾಲಯ, ವಿರಾಮದ ಕೈಸಾಲೆ ಹಾಗೂ ಇನ್ನಿತರ ಸೌಕರ್ಯಗಳನ್ನು ಹೊಸ ಕಟ್ಟಡ ಹೊಂದಿದೆ.
ಬರುವ ಡಿಸೆಂಬರ್‌ನಲ್ಲಿ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ನಡೆಯಲಿದೆ.
PublicNext
24/10/2020 11:49 am