ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ್ ಜೋಡೋ ಯಾತ್ರೆ :ತಾಯಿ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ..

ಮಂಡ್ಯ: ದಸರಾ ಬ್ರೇಕ್ ಬಳಿಕ ಮತ್ತೆ ಇಂದಿನಿಂದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಪುನಾರಂಭವಾಗಿದೆ. ಇನ್ನು ಬ್ರೇಕ್ ಬಳಿಕ ಆರಂಭವಾದ ಕಾಂಗ್ರೆಸ್ ನ ಪಾದಯಾತ್ರೆಯಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ.

ಇನ್ನು ಪಾದಯಾತ್ರೆ ವೇಳೆ ಸೋನಿಯಾ ಗಾಂಧಿ ಅವರ ಶೂ ಲೇಸ್ ಬಿಚ್ಚಿ ಹೋದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೇ, ರಸ್ತೆಯಲ್ಲಿ ಕುಳಿತು ಅಮ್ಮನ ಶೂ ಲೇಸ್ ಕಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಬೆಳ್ಳಾಲೆಯಿಂದ ಇವತ್ತಿನ ಪಾದಯಾತ್ರೆ ಆರಂಭವಾಗಿದ್ದು, ಖಾರಧ್ಯ ಕೆರೆ ಎದುರು ಮಧ್ಯಾಹ್ನ ಭೋಜನಕ್ಕೆ ವಿರಾಮ ನೀಡಲಾಗುತ್ತದೆ. ಸಂಜೆ ಮತ್ತೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಲಿದ್ದು, ಖಾರಧ್ಯ ಕೆರೆ, ಚೌಡೇನಹಳ್ಳಿ ಗೇಟ್ನಿಂದ ಬ್ರಹ್ಮದೇವರ ಹಳ್ಳಿಯವರೆಗೆ ಸಾಗಲಿದೆ. ಬ್ರಹ್ಮದೇವರ ಹಳ್ಳಿಯಲ್ಲಿ ಕಾರ್ನರ್ ಮೀಟಿಂಗ್ ನಂತರ ವಿಸ್ಡಮ್ ಶಾಲೆ ಬಳಿ ವಾಸ್ತವ್ಯಕ್ಕೆ ಆಯೋಜನೆ ಮಾಡಲಾಗಿದೆ.

Edited By : Nirmala Aralikatti
PublicNext

PublicNext

06/10/2022 02:21 pm

Cinque Terre

110.91 K

Cinque Terre

38

ಸಂಬಂಧಿತ ಸುದ್ದಿ