ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇವಲ 1 ರೂ. ವೇತನ ತೆಗೆದುಕೊಳ್ಳುತ್ತೇನೆ ಎಂದ ಪಂಜಾಬ್‌ನ ಹೊಸ ಅಡ್ವೊಕೇಟ್ ಜನರಲ್

ಚಂಡೀಗಢ: ಪಂಜಾಬ್​ ರಾಜ್ಯ ಸರ್ಕಾರ ಹೊಸದಾಗಿ ನೇಮಕ ಮಾಡಿರುವ ಅಡ್ವೋಕೇಟ್ ಜನರಲ್​ ಅನ್ಮೋಲ್​ ರತ್ತನ್​ ಸಿಧು, ತಾವು ತಮ್ಮ ಕೆಲಸಕ್ಕೆ ಕೇವಲ 1 ರೂ. ಸಂಬಳ ಪಡೆಯುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಎಲ್ಲ ಕೇಸ್​​ಗಳನ್ನು ಪಾರದರ್ಶಕವಾಗಿ ನಡೆಸುತ್ತೇನೆ. ಆದರೆ ವೃಥಾ ಹೆಚ್ಚಿನ ವೇತನ ಪಡೆದು ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವಾಗ ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೆಲಸವನ್ನು ನಿರ್ವಹಿಸುವುದರೊಂದಿಗೆ ರಾಜ್ಯದ ವೆಚ್ಚಗಳಿಗೆ ಹೊರೆಯಾಗುವುದಿಲ್ಲ. ಇದಕ್ಕಾಗಿ ಕಾನೂನು ವೇತನವಾಗಿ ಕೇವಲ 1 ರೂ. ತೆಗೆದುಕೊಳ್ಳುತ್ತೇನೆ ಎಂದು ಅನ್ಮೋಲ್​ ರತ್ತನ್​ ಸಿಧು ತಿಳಿಸಿದ್ದಾರೆ.

ಅನ್ಮೋಲ್​ ರತ್ತನ್​ ಸಿಧು ಅವರು ಪ್ರತಿಭಾವಂತ ಹಿರಿಯ ವಕೀಲರಾಗಿದ್ದಾರೆ. ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನದಲ್ಲಿ ಅವರು ಅತ್ಯಂತ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಖಾಸಗಿ ವ್ಯಕ್ತಿಗಳ ಕ್ರಿಮಿನಲ್​, ಸಿವಿಲ್​, ಸಾಂವಿಧಾನಿಕ, ಭೂಮಿಗೆ ಸಂಬಂಧಪಟ್ಟ ಪ್ರಕರಣಗಳನ್ನೂ ಕೈಗೆತ್ತಿಕೊಂಡು ಗೆದ್ದಿದ್ದಾರೆ.

ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್ ರತ್ತನ್ ಸಿಧು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಓದಿದವರು. ಬಳಿಕ ಚಂಡೀಗಢಕ್ಕೆ ಸ್ಥಳಾಂತರಗೊಂಡು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಪೂರೈಸಿದರು. ಕಾಲೇಜು ಜೀವನದಲ್ಲಿ ಒಬ್ಬ ಕ್ರಿಯಾಶೀಲ, ಸಾಮಾಜಿಕ, ರಾಜಕೀಯ ವಿದ್ಯಾರ್ಥಿಯಾಗಿ ಉಳಿದಿದ್ದ ಸಿಧು ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.

1985ರಲ್ಲಿ ವಕೀಲ ವೃತ್ತಿಯನ್ನು ಪ್ರವೇಶಿಸಿ, 1993ರಲ್ಲಿ ಪಂಜಾಬ್‌ನ ಡೆಪ್ಯುಟಿ ಅಡ್ವೊಕೇಟ್ ಜನರಲ್ ಆಗಿ ಸೇರಿಕೊಂಡಿದ್ದರು. 2007ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡ ಸಿಧು ಬಳಿಕ 2014ರ ವರೆಗೆ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

Edited By : Vijay Kumar
PublicNext

PublicNext

20/03/2022 10:58 am

Cinque Terre

65.09 K

Cinque Terre

8

ಸಂಬಂಧಿತ ಸುದ್ದಿ