ಪಬ್ಲಿಕ್ ನೆಕ್ಸ್ಟ್ ಸಮೀಕ್ಷೆವೊಂದನ್ನಾ ಕೈಗೊಂಡಿತ್ತು. ಇಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನತ ಸ್ಥಾನದಲ್ಲಿದ್ದು 20 ವರ್ಷ ಪೂರೈಸಿದ್ದಾರೆ. ಅವರ ಇದುವರೆಗಿನ ಸಾಧನೆ ಯಾವುದು ಎಂದು ನಾಲ್ಕು ಆಯ್ಕೆ ಗಳನ್ನು ನೀಡಿ ಜನರ ಓಟ್ ಸಂಗ್ರಹಿಸಲಾಗಿದೆ. ಇನ್ನು ಪಬ್ಲಿಕ್ ನೆಕ್ಸ್ಟ್ ನಡೆಸಿದ ಸಮೀಕೆಯಲ್ಲಿ ಭಾಗವಹಿಸಿದ ಜನ ಓಟ್ ಮಾಡಿದ್ದು ಹೀಗಿದೆ.
1) ಅನುಚ್ಛೇದ 370 ರದ್ದು ಪಡಿಸಿದ್ದು 39.79%
2) ಬಾಲಕೋಟ್ ದಾಳಿ 8.5%
3) ಉಜ್ವಲ ಜನ್ ಧನ್ ಆಯುಷ್ಮಾನ್ 9.12%
4) ದುಬಾರಿ ಪೆಟ್ರೋಲ್ / ಡೀಸೆಲ್ 42.58%
ಮೋದಿ ಮತ್ತು ಮೋದಿ ಸರ್ಕಾರದ ನಿಲುವುಗಳು ಜನರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಎನ್ನುವ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ ಸುಮಾರು 4000 ಜನ ಭಾಗವಹಿಸಿ ಅಗತ್ಯ ವಸ್ತುಗಳು ಸೇರಿದಂತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಬಗ್ಗೆ ಹತಾಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಲ್ಲಿ ಜನ ನೀಡಿದ ಸಮೀಕ್ಷೆ ಹೇಳುವುದು ಪ್ರಧಾನಿಗಳ ಸಾಧನೆ ಅಂದ್ರೆ ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿದೆ ಹೊರತು ಉದ್ದಾರಕ್ಕಾಗಿ ಮಾಡಿದ ಸಾಧನೆ ಸೊನ್ನೆ ಎಂದು ಹೇಳಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನ ದಿನದಿಂದ ದಿನಕ್ಕೆ ಅದೋಗತಿ ಹೋಗುತ್ತದೆ …ಭಾಷಣಗಳಲ್ಲಿ ಆಶ್ವಾಸನೆ ಕೊಡುವ ಆಡಳದಿಂದ ಜನ ರೋಸಿ ಹೋಗುತ್ತಿರುವುದನ್ನು ಸಮೀಕ್ಷೆ ವೈರಲ್ ಆಗಿದೆ.
ಪಬ್ಲಿಕ್ ನೆಕ್ಸ್ಟ್ ಸಮೀಕ್ಷೆ ನೋಡಿಯಾದ್ರು ದುಬಾರಿ ದುನಿಯಾದಲ್ಲಿ ಬೆಲೆ ಏರಿಕೆಯ ಬರೆಯಿಂದ ಬೆಂದು ಹೋಗುತ್ತಿರುವ ಜನಸಾಮಾನ್ಯರ ಬದುಕಿಗೆ ಆಸರೆಯಾಗತ್ತಾ ಮೋದಿ ಸರ್ಕಾರ?..
PublicNext
08/10/2021 01:47 pm