ಕೊಪ್ಪಳ: ರಾಜ್ಯದ ಬಹುತೇಕ ರಾಜಕಾರಣಿಗಳು ಸದ್ಯ ಆರ್‌ಎಸ್‌ಎಸ್ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ನಡುವೆ ಆರ್‌ಎಸ್‌ಎಸ್ ಶಾಖೆಗಳಲ್ಲಿ ಹಾಡಲಾಗುವ ಗೀತೆಯನ್ನು ಹಾಡಿದ ಪುಟ್ಟ ಪೋರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾನೆ.
ಇಷ್ಟು ಮುದ್ದಾಗಿ ಆರ್‌ಎಸ್‌ಎಸ್ ಗೀತೆ ಹಾಡುತ್ತಿರುವ ಈತನ ಹೆಸರು ಲೋಹಿತ್. ಕೊಪ್ಪಳ ಜಿಲ್ಲೆ ಕಾರಟಗಿಯ ಪ್ಲಂಬರ್ ಲಿಂಗರಾಜ್ ಅವರ ಮಗ ಲೋಹಿತ್ 2020ರಲ್ಲಿ ಈ ಹಾಡು ಹಾಡಿದ್ದ. ಅದರ ವಿಡಿಯೋ ಈಗ ವೈರಲ್ ಆಗಿದೆ. ಕೊಪ್ಪಳದ ಬಿಜೆಪಿ ಮುಖಂಡರು ಸೇರಿದಂತೆ ಸಂಘದ ಮುಖಂಡರು ಹಾಗೂ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
PublicNext
12/06/2022 08:21 pm