ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಗೆ ಬಾಯ್ ಬಾಯ್...ರಾಮ- ಜಮೀರ ಭಾಯ್ ಭಾಯ್

ವಿಶೇಷ ವರದಿ -- ಪ್ರವೀಣ ನಾರಾಯಣ ರಾವ್

ಬೆಂಗಳೂರು: ದಕ್ಷಿಣ ಕನ್ನಡದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನಟ್ವಾಲ್ ಹತ್ಯೆ ಪ್ರಕರಣ ಬಿಜೆಪಿ ಪಾಲಿಗೆ ಬಹಳ ದೊಡ್ಡ ಪೆಟ್ಟು ಕೊಡುವ ಎಲ್ಲಾ ಲಕ್ಷಣಗಳೂ ಗೋಚರವಾಗತೊಡಗಿದೆ..

ಕಾರ್ಯಕರ್ತರ ಆಕ್ರೋಶ ಸದ್ಯಕ್ಕೆ ಶಮನವಾಗುವಂತೆ ತೋರುತ್ತಿಲ್ಲ.. ಈಗಾಗಲೇ ಬಿಜೆಪಿಯಿಂದ ದೂರ ಸರಿದ ಅನೇಕ ನಿಷ್ಟಾವಂತ ಕಾರ್ಯಕರ್ತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳ ತೊಡಗಿದ್ದಾರೆ..

ಇದಕ್ಕೆ ಪೂರಕ ವೆಂಬಂತೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ತಿಂಡಿ ಕೇಂದ್ರದ ಡಾ ಕೆ.ವಿ. ರಾಮಚಂದ್ರ ತಮ್ಮ‌ ಅಪಾರ ಬೆಂಬಲಿಗರೊಂದಿಗೆ ಚಾಮರಾಜ ಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಜೊತೆ ಕೈಜೋಡಿಸಿ ನಿಂತಿದ್ದಾರೆ..

ಕಷ್ಟ ಎಂದ ತಕ್ಷಣ ಕ್ಷಣ ಮಾತ್ರದಲ್ಲಿ ಒದಗುವ ಜಮೀರ ಅವರೇ ಇನ್ನು ಮುಂದೆ ನಮ್ಮ ನಾಯಕರು ಎಂದು ಬಹಿರಂಗವಾಗಿ ಸಾರಿದ್ದಾರೆ.. ರಾಮಚಂದ್ರ ಮತ್ತು ಅವರ ಸಹೋದರ ಅಶ್ವಥ್ ನಾರಾಯಣ ಅವರು ಬಿಜೆಪಿಯ. ಅತ್ಯಂತ ಹಳೆಯ ಕಾರ್ಯಕರ್ತರು.. ನರೇಂದ್ರ ಮೋದಿಯವರ ಪರಮ ಭಕ್ತರು.. ಅಡ್ವಾಣಿ- ವಾಜಪೇಯಿ ಅವರ ಕಾಲದಿಂದಲೂ ಬಿಜೆಪಿ ಗೆ ನಿರಂತರ ದುಡಿದ ಜೋಡೆತ್ತುಗಳು..

ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಶಿಗೆ ಹೋಗಿ ಮೋದಿಯವರ ಹೆಸರಲ್ಲಿ ಗಿರಿಜಾಕಲ್ಯಾಣ ನೆರವೇರಿಸಿದವರು.. ತಮ್ಮ ಕನ್ನಡ ತಿಂಡಿ ಕೇಂದ್ರವನ್ನು ನಿತ್ಯ ನಿರಂತರ ಸಮಾಜ ಸೇವೆಯ ಕೇಂದ್ರವಾಗಿಸಿಕೊಂಡವರು.. ಕನ್ನಡದ ಕಟ್ಟಾಳು ರಾಮಚಂದ್ರ ಬಡವರ ಪಾಲಿಗೆ ಅನ್ನದಾತರಂತೆ‌ ಕಾರ್ಯ ನಿರ್ವಸುತ್ತಿರುವವರು..

ಬೆಂಗಳೂರಿನಲ್ಲಿ ಎಲ್ಲೇ ಧಾರ್ಮಿಕ‌ ಕಾರ್ಯಕ್ರಮಗಳಾದರೂ ಅಲ್ಲೆಲ್ಲಾ ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮ ನಡೆಸುವವರು ರಾಮಣ್ಣ- ಗುಂಡಣ್ಣ. ಅನ್ನ- ಕನ್ನಡ- ಅಂಗಾಂಗ ದಾನ ಇವುಗಳನ್ನು ತಮ್ಮ ಉಸಿರಾಗಿಸಿಕೊಂಡವರು.. ಇಂತಹ ರಾಮಚಂದ್ರ ಅವರು ಬಿಜೆಪಿ ಗೆ ದೊಡ್ಡ ಆಸ್ತಿಯಂತಿದ್ದರು.. ಹಲವು ದಶಕ ಗಳಿಂದ ಯಾವುದೇ ಫಲಾಫೇಕ್ಷೆ ಇಲ್ಲದೇ ಬಿಜೆಪಿ ಕಾರ್ಯಕರ್ತರಾಗಿ ನಿರಂತರ ದುಡಿಯುತ್ತಾ ಬಂದಿದ್ದರು.

ಅಂತಹ ನಿಷ್ಟಾವಂತ ಕಾರ್ಯಕರ್ತರು ಇವತ್ತು ಬಿಜೆಪಿಯಿಂದ ದೂರವಾಗಿರುವುದು ಬಿಜೆಪಿ ಗೆ ಅದು ದೊಡ್ಡ ನಷ್ಟ ಅಂತಲೇ ಹೇಳಬಹುದು..‌ಇದಕ್ಕೆ ಪ್ರತಿಯಾಗಿ ಚಾಮರಾಜಪೇಟೆ ಶಾಸಕ ಜಮೀರ್ ರಾಮಚಂದ್ರ ನನ್ನ ಜೊತೆ ಬಂದಿರುವುದು ನಮಗೊಂದು ದೊಡ್ಡ ಆನೆಬಲ ಬಂದಂತಾಗಿದೆ ಎಂದಿದ್ದಾರೆ...

Edited By : Somashekar
PublicNext

PublicNext

29/07/2022 08:28 pm

Cinque Terre

113.58 K

Cinque Terre

27

ಸಂಬಂಧಿತ ಸುದ್ದಿ