ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಜಾಮ್ನಗರಕ್ಕೆ ಆಗಮಿಸಿದ್ರು.. ನಗರದಲ್ಲಿ ನಿರ್ಮಿಸಿರುವ ಮೆಗಾ ಸೌರ ವಿದ್ಯುತ್ ಸ್ಥಾವರವನ್ನು ಉದ್ಘಾಟನೆ ಹಿನ್ನೆಲೆ ನಗರಕ್ಕೆ ಬಂದಿದ್ದ ಮೋದಿಯವರನ್ನು ಅಲ್ಲಿನ ಜನರು ಅದ್ಧೂರಿಯಾಗಿ ಸ್ವಾಗತಿಸಿ, ಜೊತೆಗೆ ಮೋದಿ.. ಎಂದು ಘೋಷಣೆ ಮೂಲಕ ಸಂಭ್ರಮಿಸಿದ್ದಾರೆ.
ಇದೇ ವೇಳೆ ಶುಭಾಶಯ ಕೋರಲು ಬಂದ ಜನರನ್ನು ಮಾತನಾಡಿಸಲು ಸ್ವತ: ಮೋದಿಯವರು ತಮ್ಮ ಕಾರಿನಿಂದ ಇಳಿದು ಬಂದು ಜನರನ್ನು ಭೇಟಿಯಾದ್ರು. ಈ ವೇಳೆ ವ್ಯಕ್ತಿಯೊಬ್ಬರು ಪ್ರಧಾನಿಗೆ ಅವರ ತಾಯಿ ಹಿರಾಬೇನ್‌ರವರ ಜೊತೆ ತೆಗೆಸಿದ ಚಿತ್ರದ ಉಡುಗರೆ ನೀಡಿದ್ದಾರೆ. ಅಲ್ಲದೇ ಚಿತ್ರದ ಫ್ರೆಮ್‌ಗೆ ಆಟೋಗ್ರಾಫ್ ಹಾಕಿಸಿಕೊಂಡ ದೃಶ್ಯಕಂಡುಬಂತು.
ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪ್ರಧಾನಿಯವರ ಸರಳತೆ ಹಾಗೂ ಜನರೊಡನೆ ಬೆರೆತ ದೃಶ್ಯಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
PublicNext
10/10/2022 08:09 pm