ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಸರಕಾರಿ ಬಂಗಲೆಗೆ ಕೇಜ್ರಿವಾಲ್ ವಿದಾಯ - ಭಾವುಕರಾಗಿ ಬೀಳ್ಕೊಟ್ಟ ಅಧಿಕಾರಿಗಳು

ನವದೆಹಲಿ: ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇಂದು ದೆಹಲಿಯಲ್ಲಿದ್ದ ತಮ್ಮ ಸರಕಾರಿ ನಿವಾಸವನ್ನು ತೊರೆದಿದ್ದಾರೆ. ಈ ವೇಳೆ ನಿವಾಸದ ಸಿಬ್ಬಂದಿಗೆ ಧನ್ಯವಾದಗಳನ್ನುತಿಳಿಸಿದರು.

ಕೆಲವರು ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ಕುಟುಂಬ ಸದಸ್ಯರೊಂದಿಗೆ ದೆಹಲಿ 6, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ನಿವಾಸದಿಂದ ಹೊರಬಂದ ಕೇಜ್ರಿವಾಲ್‌ ಅವರು, ಸಾಮಾನ್ಯ ಕೆಲಸಗಾರರೊಬ್ಬರನ್ನು ಅಪ್ಪಿಕೊಂಡು ನಿವಾಸ ತೊರೆದು ಗಮನ ಸೆಳೆದರು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಒಂಬತ್ತು ವರ್ಷಗಳಿಂದ ಇದ್ದ ಮನೆಯನ್ನು ಪತ್ನಿ, ಮಗ, ಮಗಳು ಮತ್ತು ತಂದೆ, ತಾಯಿಯೊಂದಿಗೆ ತೊರೆದು ಎರಡು ಕಾರುಗಳಲ್ಲಿ 5, ಫಿರೋಜ್‌ಶಾ ರಸ್ತೆ ಮಂಡಿ ಹೌಸ್‌ಗೆ ಹೊರಟರು. ಮಂಡಿ ಹೌಸ್ ಬಂಗಲೆಯನ್ನು ಪಂಜಾಬ್‌ನ ಎಎಪಿಯ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರಿಗೆ ನೀಡಲಾಗಿತ್ತು.

ಇದಕ್ಕೂ ಮುನ್ನ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಆಸ್ತಿಯ ಕೀಗಳನ್ನು ಸರ್ಕಾರಿ ಅಧಿಕಾರಿಗೆ ಹಸ್ತಾಂತರಿಸಿದರು. 6, ಫ್ಲಾಗ್‌ಸ್ಟಾಫ್ ಬಂಗಲೆಯು ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದೆ. ಕೇಜ್ರಿವಾಲ್ ಕುಟುಂಬ ಈ ಮನೆಗೆ 'ಗೃಹ ಪ್ರವೇಶ' ಮಾಡುವ ಮೂಲಕ ಪ್ರವೇಶಿಸಿದ್ದರು.

Edited By : Nagaraj Tulugeri
PublicNext

PublicNext

04/10/2024 10:56 pm

Cinque Terre

75.41 K

Cinque Terre

2

ಸಂಬಂಧಿತ ಸುದ್ದಿ