ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಯುಪಿಎ ಅಧಿಕಾರಾವಧಿಯಲ್ಲಿ ಕೆಟ್ಟ ಸಾಲಗಳು ಹೆಚ್ಚಾಗಿದ್ದವು - ಮೋದಿ ಸರ್ಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಸುಧಾರಿಸಿತು'

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಒಂದು ಕಾಲದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದರು. ಕೆಲ ಆರ್ಥಿಕ ನಿರ್ಧಾರಗಳನ್ನು ಕಟುವಾಗಿ ವಿರೋಧಿಸಿದ್ದು ಉಂಟು. ಆದರೆ ಈಗ ನರೇಂದ್ರ ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಯುಪಿಎ 2 ಆಡಳಿತದಲ್ಲಿ 2013ರಲ್ಲಿ ಆರ್‌ಬಿಐ ಗವರ್ನರ್ ಹುದ್ದೆಯನ್ನು ವಹಿಸಿಕೊಂಡಿದ್ದರು. ಇದಾದ ಬಳಿಕ ಬ್ಯಾಂಕ್‌ಗಳ ಸುಸ್ತಿ ಸಾಲವನ್ನು ನಿಭಾಯಿಸಲು ಪ್ರಯತ್ನಿಸಿದ್ದಾಗ, 2014ರಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಇದಕ್ಕೆ ಸಾಕಷ್ಟು ಸಹಾಯ ಮಾಡಿದರು ಎಂದು ರಘುರಾಮ್ ರಾಜನ್ ಹೇಳಿದರು. ಇದರೊಂದಿಗೆ ಇನ್ನೂ ಹಲವು ವಿಷಯಗಳನ್ನು ರಘುರಾಮ್ ರಾಜನ್ ಹೇಳಿಕೊಂಡಿದ್ದಾರೆ.

ದಿ ಪ್ರಿಂಟ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್, NPA ಆ ಪರಿಪ್ರಮಾಣದಲ್ಲಿ ಹೆಚ್ಚಳವಾಗಲು ಯುಪಿಎ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಾನು ಅಂದಿನ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ನಮ್ಮ ಬಳಿ ಇಷ್ಟು ಕೆಟ್ಟ ಸಾಲ ಇದೆ. ಅದರಿಂದ ಹೊರಬರಬೇಕು. ಅದಾಗದೇ ಇದ್ದರೆ, ವ್ಯವಸ್ಥೆ ಸರಿ ಹೋಗುವುದಿಲ್ಲ ಅಥವಾ ಸಾಲ ನೀಡಲು ಸಾಧ್ಯವಾಗುವುದಿಲ್ಲ ಎಂದು ಮನರವಿಕೆ ಮಾಡಿಕೊಟ್ಟಿದ್ದೆ. ನನ್ನ ಮಾತು ಆಲಿಸಿದ ಅರುಣ್ ಜೇಟ್ಲಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದರು, ಮುನ್ನುಗ್ಗಿ ಎಂದು ಹೇಳಿದ್ದರು. ನಂತರ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಕ್ರಿಯೆ, ರೈಟ್ ಆಫ್ ಮಾಡುವ ಪ್ರಕ್ರಿಯೆ ಆರಂಭವಾಯಿತು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಯುಪಿಎ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ಅದಾಗಲೇ ಆರಂಭವಾಗಿದ್ದ ಹಲವು ಯೋಜನೆಗಳಿಗೆ ಸಮಸ್ಯೆ ಎದುರಾಗಿತ್ತು. ಹೆಚ್ಚುವರಿಯಾಗಿ ಭಾರತ ಭ್ರಷ್ಟಾಚಾರ, ಹಗರಣಗಳಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು, ಇದರಿಂದಾಗಿ ಅನುಮತಿಗಳು ದೊರೆಯುವುದು ಕಷ್ಟವಾಗತೊಡಗಿತ್ತು. ಯೋಜನೆಗಳಿಗೆ ಭೂಮಿ ಲಭ್ಯವಾಗುತ್ತಿರಲಿಲ್ಲ. ಪರಿಸರ ಅನುಮತಿ ಸಿಗುತ್ತಿರಲಿಲ್ಲ. ಇದರಿಂದಾಗಿ ಎನ್‌ಪಿಎ ಗಳು ಬೆಳೆಯತೊಡಗಿತು ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

21/12/2024 10:41 am

Cinque Terre

25.61 K

Cinque Terre

1

ಸಂಬಂಧಿತ ಸುದ್ದಿ