ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಐತಿಹಾಸಿಕ ಹೆಜ್ಜೆ, ಜನವರಿಯಲ್ಲಿ ಕಾರ್ಯಾರಂಭ: ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: 2025ರ ಜನವರಿಯಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪಿಸುವುದು ಬೆಂಗಳೂರಿಗೆ ಐತಿಹಾಸಿಕ ಮೈಲಿಗಲ್ಲು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅಮೆರಿಕ ವೀಸಾಕ್ಕೆ ಕರ್ನಾಟಕದಿಂದ ಬೇಡಿಕೆ ಹೆಚ್ಚಾಗಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಯುಎಸ್‌ ಕಾನ್ಸುಲೆಟ್ ಆರಂಭವಾಗುವ ಸೂಚನೆಯನ್ನು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ನೀಡಿದ್ದಾರೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

"ಹಲವು ವರ್ಷಗಳಿಂದ ಭಾರತಕ್ಕೆ ಶೇಕಡ 40ರಷ್ಟು ಐಟಿ ರೆವೆನ್ಯೂ ನೀಡುತ್ತಿದ್ದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕ ದೂತವಾಸದ ಕೊರತೆಯಿತ್ತು. ಬೆಂಗಳೂರಿಗೆ ಅಮೆರಿಕ ದೂತವಾಸ ಕಚೇರಿ ಅಗತ್ಯವಿದೆ ಎಂದು 2019ರ ನವೆಂಬರ್‌ ತಿಂಗಳಲ್ಲಿ ನಾನು ಡಾ. ಎಸ್‌. ಜೈಶಂಕರ್ ಅವರಿಗೆ ಮನವಿ ಮಾಡಿದ್ದೆ. 2023ರಲ್ಲಿ ಅವರು ಬೆಂಗಳೂರಿಗೆ ಆಗಮಿಸಿದಾಗ ಈ ಕುರಿತು ಭರವಸೆ ನೀಡಿದ್ದರು. 2020ರ ಅಮೆರಿಕ ಭೇಟಿ ಸಮಯದಲ್ಲಿ ಆಗಿನ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರಲ್ಲಿ ಭಾರತ ಅಮೆರಿಕ ಸಂಬಂಧಗಳಲ್ಲಿ ಬೆಂಗಳೂರಿನ ಪಾತ್ರದ ಕುರಿತು ತಿಳಿಸಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಮಯದಲ್ಲಿ ಈ ಕುರಿತು ಅಂತಿಮಗೊಳಿಸಲಾಗಿತ್ತು. ಇದೀಗ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಅವರ ಘೋಷಣೆ ಕೇಳಿ ರೋಮಾಂಚನಗೊಂಡೆ. ದೀರ್ಘಕಾಲದ ಬೇಡಿಕೆ ಅಂತಿಮವಾಗಿ ಕಾರ್ಯರೂಪಕ್ಕೆ ಬಂದಿರುವುದನ್ನು ಕೇಳಿ ಖುಷಿಯಾಗಿದೆ" ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅಮೆರಿಕ ವೀಸಾಕ್ಕೆ ಅರ್ಜಿ ಸಲ್ಲಿಸುವವರ ಸಂದರ್ಶನದ ಶೆಡ್ಯೂಲ್‌ ಅನ್ನು ಜನವರಿ 1, 2025ರಿಂದ ಬೆಂಗಳೂರಿಗೆ ವರ್ಗಾಯಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ. ಅಂದರೆ, ಚೆನ್ನೈ, ಹೈದರಾಬಾದ್‌ ಮುಂತಾದ ಕಡೆಗಳಲ್ಲಿ ಜನವರಿ ನಂತರ ಸಂದರ್ಶನ ನಿಗದಿಯಾಗಿದ್ದರೆ ಬೆಂಗಳೂರಿಗೆ ವರ್ಗಾಯಿಸಿಕೊಳ್ಳಬಹುದು. ನಿಗದಿತ ಸಂದರ್ಶನ ಸಮಯಕ್ಕೆ ಹೋಗಲಾಗದೆ ಇರುವವರು ಅಥವಾ ಎರಡನೇ ಬಾರಿ ಅರ್ಜಿ ಸಲ್ಲಿಸುವವರು ಮತ್ತೆ ಶುಲ್ಕ ಪಾವತಿಸಬೇಕು ಎಂದು ಯುಎಸ್‌ ಎಂಬೆಸ್ಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Edited By : Vijay Kumar
PublicNext

PublicNext

21/12/2024 07:28 am

Cinque Terre

27.8 K

Cinque Terre

1

ಸಂಬಂಧಿತ ಸುದ್ದಿ