ಬೆಂಗಳೂರು: ಆಕ್ಸಿಜನ್ ಪ್ರಮಾಣ ಏರಿಳಿತ ಹಾಗೂ ಶ್ವಾಸಕೋಶ ಸಮಸ್ಯೆಯೊಂದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್.ಎಂ ಕೃಷ್ಣರನ್ನು ಬೆಂಗಳೂರಿನ ಮಣಿಪಾಲ್ ಆಸ್ಫತ್ರೆಗೆ ದಾಖಲಿಸಲಾಗಿದ್ದು, ಡಾ.ಸತ್ಯನಾರಾಯಣ್ ಮತ್ತು ಡಾ.ಸುನೀಲ್ ಕಾರಂತ್ ವೈದ್ಯರ ತಂಡದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ವಾಸಕೋಶದಲ್ಲಿ ಆಕ್ಸಿಜನ್ ಪ್ರಮಾಣ ಏರುಪೇರು ಆಗುತ್ತಿದ್ದು, ವೈದ್ಯರ ತಂಡ ಹೆಚ್ಚಿನ ನಿಗಾ ವಹಿಸಿದೆ. ಸದ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಮೇಲ್ವಿಚಾರಣೆ ನಡೆಸುತ್ತಿದ್ದು, ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿದ್ದಾರೆ.
PublicNext
25/09/2022 10:57 am