ಬೆಂಗಳೂರು: ನೆರೆ ರಾಜ್ಯದ ಜನ ಕರ್ನಾಟಕಕ್ಕೆ ಬರಲು ನಾವು ಯಾವುದೇ ನಿರ್ಬಂಧ ಹೇರಿಲ್ಲ. ಕೊರೊನಾ ತಪಾಸಣೆಯನ್ನಷ್ಟೇ ಕಡ್ಡಾಯ ಮಾಡಿದ್ದೇವೆ. ಇದಕ್ಕೆ ನೆರೆ ರಾಜ್ಯದಿಂದ ಬರುವವರು ಸಹಕರಿಸಬೇಕು. ಮದುವೆ ಸಮಾರಂಭಗಳಿಗೆ ಮಾರ್ಷಲ್ ನಿಯೋಜನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಅವರು, ಕೇರಳ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆಯ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿಯೂ ಕೊರೊನಾ ಎರಡನೇ ಅಲೆಯ ಆತಂಕವಿದೆ. ನೆರೆ ರಾಜ್ಯಗಳವರಿಗೆ ನಾವು ಇಲ್ಲಿಗೆ ಬರಲು ನಿರ್ಬಂಧ ಹೇರಿಲ್ಲ. ತಪಾಸಣೆ ಕಡ್ಡಾಯ ಮಾತ್ರ ಮಾಡಿದ್ದೇವೆ, ಸಹಕರಿಸಬೇಕು. ನೆರೆ ರಾಜ್ಯಗಳಲ್ಲಿ ತಪ್ಪು ಸಂದೇಶ ಇದೆ. ಗಡಿ ಜಿಲ್ಲೆಗಳ ಬಗ್ಗೆ ವಿಶೇಷ ನಿಗಾ ಇಡಬೇಕಾಗಿದೆ. ಶೀಘ್ರದಲ್ಲಿ ನೆರೆ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ಮಾಡಿ ಅಲ್ಲಿನ ಸಹಕಾರ ಕೋರುತ್ತೇವೆ. ಅಲ್ಲಿಂದ ಬರುವವರಿಗೆ ಅಲ್ಲೇ ತಪಾಸಣೆ ಮಾಡಿ ರಿಪೋರ್ಟ್ ತರುವಂತೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
PublicNext
22/02/2021 02:59 pm