ಪಾಟ್ನಾ: ದೇಶದ ಜನರಿಗೆ ವಿಶ್ವಾಸ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕೊರೊನಾ ಲಸಿಕೆಗಳನ್ನು ಮೊದಲು ಪಡೆಯಬೇಕು ಎಂದು ಬಿಹಾರದ ಭಾಗಲ್ಪುರ್ ಕಾಂಗ್ರೆಸ್ ಶಾಸಕ ಅಜಿತ್ ಶರ್ಮಾ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಷ್ಯಾ, ಇಸ್ರೇಲ್ ಮತ್ತು ಅಮೆರಿಕ ಪ್ರಧಾನಿಗಳು ತಮ್ಮ ದೇಶದ ಕೋವಿಡ್ ಲಸಿಕೆಗಳನ್ನು ಪಡೆಯುವ ಮೂಲಕ ಲಸಿಕೆಯ ಸುರಕ್ಷತೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಆದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರೇ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಲಿ. ಈ ಮೂಲಕ ಲಸಿಕೆಯ ಕುರಿತು ಜನರಲ್ಲಿ ಮೂಡಿರುವ ಭಯವನ್ನು ಹೋಗಲಾಡಿಸಲಿ ಎಂದು ತಿಳಿಸಿದ್ದಾರೆ.
ಲಸಿಕೆ ತಯಾರಿಕೆಯ ಫಲ ಬಿಜೆಪಿ ಸರ್ಕಾರದ್ದಲ್ಲ. ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ಗಳ ಸ್ಥಾಪನೆಗೆ ಕಾಂಗ್ರೆಸ್ ಪಕ್ಷ ಕಾರಣ. ಹೀಗಾಗಿ ಲಸಿಕೆ ಅಭಿವೃದ್ಧಿಯ ಶ್ರೇಯ ಕಾಂಗ್ರೆಸ್ ಪಕ್ಷಕ್ಕೇ ಸಲ್ಲಬೇಕು ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
05/01/2021 04:35 pm