ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಏಳು ಕೋಟಿ ಐವತ್ತು ಲಕ್ಷ ಡೋಸ್ ಪೂರ್ಣಗೊಂಡಿದೆ: ಸಚಿವ ಡಾ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ 62% ಸೆಕೆಂಡ್ ಡೋಸ್ ನೀಡಲಾಗಿದೆ. ನಿನ್ನೆಗೆ ಏಳು ಕೋಟಿ ಐವತ್ತು ಲಕ್ಷ ಡೋಸ್ ಪೂರ್ಣಗೊಂಡಿದೆ. ಅತ್ಯಂತ ಹೆಚ್ಚು ಲಸಿಕೆ ಕೊಟ್ಟ ರಾಜ್ಯಗಳಲ್ಲಿ ಕರ್ನಾಟಕವೂ ಇದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದುವರೆದ ದೇಶಗಳಲ್ಲಿ ಕೂಡಾ ಲಸಿಕೆ ತೆಗೆದುಕೊಳ್ಳಲು ಜನ ಹಿಂದೇಟು ಹಾಕ್ತಿದಾರೆ. ಇನ್ನೂ ಲಸಿಕೆ ಪಡೆಯದಿರುವವರು ಶೀಘ್ರದಲ್ಲಿ ಪಡೆಯಬೇಕು. ಏರ್‌ಪೋರ್ಟ್‌ನಲ್ಲಿ ಸ್ವತಃ ಹೋಗಿ ಪರಿಶೀಲಿಸಿದ್ದೇನೆ. ಅಲ್ಲಿ ಕೂಡಾ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿದವರಿಗೆ ಮೂರರಿಂದ ನಾಲ್ಕು ತಾಸಿನಲ್ಲಿ ರಿಸಲ್ಟ್ ಬರುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಸುಧಾಕರ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

02/12/2021 11:53 am

Cinque Terre

41.16 K

Cinque Terre

8

ಸಂಬಂಧಿತ ಸುದ್ದಿ