ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕೋವಿಡ್-19 ದೃಢಪಟ್ಟ ಬಳಿಕ ಹೋಂ ಐಸೋಲೇಷನ್‌ನಲ್ಲಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕಳೆದ ಸೋಮವಾರದಿಂದ ನಾನು ಕೋವಿಡ್-19 ವೈರಸ್ ಪೀಡಿತನಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್‌ನಲ್ಲಿದ್ದೆ. ವೈದ್ಯರ ಸಲಹೆ ಮೇರೆಗೆ ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ' ಎಂದು ತಿಳಿಸಿದ್ದಾರೆ.

ಹೋಂ ಐಸೋಲೇಷನ್ ನಲ್ಲಿದ್ದರೂ ಸಚಿವರು ಆನ್‌ಲೈನ್ ಮೂಲಕ ಸರ್ಕಾರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಫೇಸ್‌ಬುಕ್ ಲೈವ್ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Edited By : Vijay Kumar
PublicNext

PublicNext

11/10/2020 09:36 am

Cinque Terre

94.62 K

Cinque Terre

2

ಸಂಬಂಧಿತ ಸುದ್ದಿ