ಬೆಂಗಳೂರು: ರಾಜ್ಯದ ನಿಗಮ ಮಂಡಳಿಯ ಅಧ್ಯಕ್ಷ,ಉಪಾಧ್ಯಕ್ಷರ ನಾಮನಿರ್ದೇಶನವನ್ನ ಸರ್ಕಾರ ಈಗ ರದ್ದುಗೊಳಿಸಿದ ಆದೇಶ ಹೊರಡಿಸಿದೆ.
ಇರೋ ಎಲ್ಲ 22 ನಿಗಮ ಮಂಡಳಿಯ ನೇಮಕಾತಿಯನ್ನ ಸರ್ಕಾರ ರದ್ದುಗೊಳಿಸಿದೆ. ಆಯಾ ವ್ಯಾಪ್ತಿಗೆ ಒಳಪಟ್ಟಂತೆ ಪ್ರತೇಕವಾಗಿ ಸರ್ಕಾರದ ಆದೇಶವನ್ನ ಹೊರಡಿಸುವಂತೆ ಸೂಚಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಲಸಂಪನ್ಮೂಲ,ನಗರಾಭಿವೃದ್ಧಿ ಇಲಾಖೆ,ಇಂಧನ ಇಲಾಖೆ,ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ,ಮಾಹಿತಿ ತಂತ್ರಜ್ಞಾನ ಇಲಾಖೆ ಸೇರಿದಂತೆ ನಿಗಮ ಮಂಡಳಿ ಮುಖ್ಯಕಾರ್ಯದರ್ಶಿ,ಅಧ್ಯಕ್ಷ,ಉಪಾಧ್ಯಕ್ಷ ನೇಮಕಾತಿ ರದ್ದು ಪಡಿಸಲಾಗಿದೆ.ಹೊಸಬರಿಗೆ ಅವಕಾಶ ನೀಡಲು ಯೋಜನೆ ರೂಪಿಸಲಾಗಿದೆ.
PublicNext
12/07/2022 04:56 pm