ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿದ್ದು, ಇವುಗಳ ವಿವರವನ್ನು ಸಾರ್ವಜನಿಕರ ಮುಂದೆ ಇಡುವ ಕಾರ್ಯಕ್ರಮ ಬಿಜೆಪಿ ಪಕ್ಷದ ವತಿಯಿಂದ ನಡೆಯಲಿದೆ ಎಂದು ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನಿವಾಸ್ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಹತ್ತು ಪ್ರಮುಖ ಕಾರ್ಯಕ್ರಮಗಳನ್ನು ಜನತೆಯ ಮುಂದೆ ಇಡಲಾಗುವುದು ಎಂದ ಅವರು ಜೂನ್ 15 ರವರೆಗೆ ಸೇವಾ, ಸುಶಾಸನ, ಬಡವರ ಕಲ್ಯಾಣ ಎನ್ನುವ ಹೆಸರಿನಲ್ಲಿ ಈ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಲಿದ್ದು ಗರೀಬ್ ಕಲ್ಯಾಣ್, ಕೃಷಿ ಸಮ್ಮಾನ್, ಉಜ್ವಲ್ ಯೋಜನೆ, ಆಯುಷ್ಮಾನ್ ಮೊದಲಾದ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದ ಅವರು ಪುತ್ತೂರು ನಗರದಲ್ಲಿ
15 ಸಾವಿರ ಮನೆ ಮತ್ತು ಗ್ರಾಮಾಂತರದಲ್ಲಿ 30 ಸಾವಿರ ಮನೆಗಳ ಭೇಟಿಯನ್ನೂ ಈ ಕಾರ್ಯಕ್ರಮದ ಮೂಲಕ ಜೋಡಿಸಲಾಗಿದೆ. ಅಲ್ಲದೆ ಪುತ್ತೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸಾರ್ವಜನಿಕ ಸಭೆಗಳ ಮೂಲಕವೂ ಜನರಿಗೆ ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ಮಾಹಿತಿ ಮತ್ತು ಯೋಜನೆಯಲ್ಲಿ ಜನತೆಯನ್ನು ಜೋಡಿಸುವ ಕಾರ್ಯವೂ ಈ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದರು.
PublicNext
30/05/2022 01:20 pm