ಬೆಂಗಳೂರು ; ಪಿ ಎಸ್ ಐ ಪರೀಕ್ಷೆ ಅಕ್ರಮ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇರುವ ಫೋಟೋ ವೈರಲ್ ಆದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಇಂದು ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ವರದಿಗಾರರು ದಿವ್ಯಾಹಾಗರಗಿ ಅವರ ಜೊತೆ ನೀವು ಇರುವ ಫೋಟೋವನ್ನೇ ಬಿಜೆಪಿಯವರು ಅಸ್ತ್ರ ವಾಗಿಸಲು ಸಿದ್ದತೆ ನಡೆಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಅವರು ನೋಟೀಸ್ ಕೊಡಲಿ ನಾನು ಉತ್ತರ ಕೊಡ್ತೇನೆ. ಯಾರ ಫೋಟೋನೋ ಕಥೆನೋ ಎಲ್ಲಾ ಅಲ್ಲೇ ಹೇಳ್ತೇನೆ ಎಂದು ಉತ್ತರ ಕೊಟ್ಟಿದ್ದಾರೆ.
PublicNext
26/04/2022 05:39 pm