ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷಕ್ಕೆ ರಾಜ್ಯ ಸರ್ಕಾರದ ಗಿಫ್ಟ್: ಆಸ್ತಿ ರಿಜಿಸ್ಟ್ರೇಷನ್‌ ಶುಲ್ಕ ಶೇ.10ರಷ್ಟು ಕಡಿತ

ಬೆಂಗಳೂರು: ಹೊಸ ವರ್ಷಕ್ಕೆ ಕಂದಾಯ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ರೆವೆನ್ಯೂ ಮನೆಯ ಗೈಡನ್ಸ್‌ ವ್ಯಾಲ್ಯೂ 10%ರಷ್ಟು ಕಡಿಮೆ ಮಾಡಲಾಗಿದೆ. ಜಮೀನು, ಸೈಟು, ಪ್ಲ್ಯಾಟ್‌ ಖರೀದಿಗೆ ರಿಜಿಸ್ಟ್ರೇಷನ್‌ ಶುಲ್ಕ ಶೇಕಡಾ 10%ರಷ್ಟು ಕಡಿಮೆ ಇರುತ್ತದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು,”ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡ್ತಾರೆ ಅಂತವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಲಾಗುತ್ತೆ. ಅಗ್ರಿಮೆಂಟ್ ಆಗಿರುವ ರಿಜಿಸ್ಟ್ರೇಷನ್ ಮಾಡಿಸುವರಿಗೆ ಇದು ಅನ್ವಯಸಲಾಗಿದೆ. ಆದ್ರೆ, ಮೂರು ತಿಂಗಳು ಮಾತ್ರ ಅವಕಾಶ ನೀಡಲಾಗಿದೆ” ಎಂದರು.

ಇನ್ನು “ಇಂದಿನಿಂದ (ಜನವರಿ 2022) ಮಾರ್ಚ್‌ 31ರವರೆಗೂ ಈ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು,ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ. ಆಯಾ ಪ್ರದೇಶದ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯವಾಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್‌ಗೆ ಇದು ಅನ್ವಯವಾಗಲಿದೆ” ಎಂದರು.

Edited By : Nagaraj Tulugeri
PublicNext

PublicNext

01/01/2022 08:33 pm

Cinque Terre

76.46 K

Cinque Terre

2

ಸಂಬಂಧಿತ ಸುದ್ದಿ