ಬೆಂಗಳೂರು: ಇತ್ತೀಚೆಗೆ ಬ್ಯಾಂಕಿಂಗ್‌ನಿಂದ ಹಿಡಿದು ಎಲ್ಲ ಪತ್ರವ್ಯವಹಾರಗಳೂ ಡಿಜಿಟಲ್ ರೂಪ ಪಡೆಯುತ್ತಿವೆ. ಇದೀಗ ವೋಟರ್ ಐಡಿ ಕಾರ್ಡ್ (ಮತದಾರರ ಗುರುತಿನ ಚೀಟಿ) ಕೂಡ ಡಿಜಿಟಲ್ ರೂಪ ಪಡೆಯುತ್ತಿದ್ದು, ಇನ್ನೊಂದು ವರ್ಷದೊಳಗೆ ವೋಟರ್ ಐಡಿ ಕಾರ್ಡ್‌ಗೆ ಡಿಜಿಟಲ್ ರೂಪ ನೀಡಲು ಚುನಾವಣಾ ಆಯೋಗ ಯೋಜಿಸಿದೆ.
ಇದರಿಂದ ದೇಶದ ಮತದಾರರಿಗೆ ಹಲವು ಅನುಕೂಲಗಳಿದ್ದು, ಆಧಾರ್ ಕಾರ್ಡ್ ಮಾದರಿಯಲ್ಲಿಯೇ ಮತದಾರನು ತನ್ನ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಪ್ರಸ್ತುತ ಭೌತಿಕ ಕಾರ್ಡ್ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗಾಗಿ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಯಲ್ಲಿ ಸುಧಾರಣೆ ತರಲು ಚಿಂತಿಸಿದೆ.
ಮುಂಬರಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆಗೆ (2021) ಮತದಾರರ ಗುರುತಿನ ಚೀಟಿಯನ್ನು ಡಿಜಿಟಲ್ ರೂಪದಲ್ಲಿ ತರಲು ಚುನಾವಣಾ ಆಯೋಗ ಯೋಜನೆ ರೂಪಿಸಿದೆ. ಹೊಸದಾಗಿ ನೋಂದಣಿಯಾದ ಮತದಾರರು ಸಹಜವಾಗಿಯೇ ಡಿಜಿಟಲ್ ವೋಟರ್ ಐಡಿ ಕಾರ್ಡ್ ಪಡೆಯಲಿದ್ದಾರೆ.
PublicNext
11/12/2020 07:05 pm