ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಭೂತಗಳಲ್ಲಿ ಅಜಾತಶತ್ರು ಎಸ್‌ಎಂ ಕೃಷ್ಣ ಲೀನ

ಮಂಡ್ಯ: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಿತು. ಎಸ್‌.ಎಂ ಕೃಷ್ಣ ಅವರ ಚಿತೆಗೆ ಮೊಮ್ಮಗ, ಡಿಸಿಎಂ ಡಿಕೆ ಶಿವಕುಮಾರ್‌ ಅವರ ಅಳಿಯ ಅಮರ್ತ್ಯ ಹೆಗಡೆ ಅಗ್ನಿಸ್ಪರ್ಷ ಮಾಡಿದರು.

ಸೋಮನಹಳ್ಳಿಯ ಕಾಫಿ ಡೇ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯದ ಪ್ರಕಾರ ಶ್ರೀರಂಗಪಟ್ಟಣದ ಪುರೋಹಿತರಾದ ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಸಾಂಪ್ರದಾಯಿಕ ವಿಧಿವಿಧಾನ ಕಾರ್ಯ ನಡೆಯಿತು. ಮೊದಲು ಪುಣ್ಯಾಹ, ಬಳಿಕ ಪಂಚಗವ್ಯ, ಸ್ನಾನ, ಸ್ನಾನದ ಬಳಿಕ ಕರ್ಣ ಮಂತ್ರ ಪಾರಾಯಣ, ಉತ್ಕ್ರಾಂತ ತಿಲಪಾತ್ರ ದಾನ, ಗೋದಾನ, ದಶದಾನ ಮಾಡಲಾಯಿತು. ಆ ಬಳಿಕ ಪಾರ್ಥಿವ ಶರೀರಕ್ಕೆ ಮೊಮ್ಮಗ ಅಮೃರ್ತ್ಯ ಹೆಗಡೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಎಸ್‌ಎಂ ಕೃಷ್ಣ ಅವರು ಪಂಚಭೂತಗಳಲ್ಲಿ ಲೀನವಾದರು.

ಅಂತ್ಯ ಸಂಸ್ಕಾರಕ್ಕೆ 1 ಸಾವಿರ ಕೆಜಿ ಶ್ರೀಗಂಧ ಬಳಕೆ ಮಾಡಲಾಯಿತು. ಅಂತಿಮ ನಮನದ ವೇಳೆ 300 ಕೆಜಿ ಸೇವಂತಿಗೆ, ಗುಲಾಬಿ ಹಾಗೂ ಚೆಂಡು ಹೂವು ಬಳಕೆ ಮಾಡಲಾಯಿತು. ಎಸ್.​ ಎಂ. ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಎಚ್.ಡಿ.ಕುಮಾರಸ್ವಾಮಿ, ಸ್ಪೀಕರ್ ಯು.ಟಿ.ಖಾದರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ನಮನ ಸಲ್ಲಿಸಿದರು.

Edited By : Ashok M
PublicNext

PublicNext

11/12/2024 06:51 pm

Cinque Terre

65.92 K

Cinque Terre

1

ಸಂಬಂಧಿತ ಸುದ್ದಿ