ಬೆಂಗಳೂರು: ಆಂಟಿ ಪ್ರೀತ್ಸೆ ಸಿನಿಮಾದ ಪ್ರೊಡ್ಯೂಸರ್ ಮುನಿರತ್ನ ಇದೀಗ ಮೊಟ್ಟೆ ಕಾರ್ಯಕ್ರಮದ ಡೈರೆಕ್ಟರ್, ಪ್ರೊಡ್ಯೂಸರ್ ಹಾಗೂ ಆಕ್ಟರ್ ಕೂಡ ಆಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ನಿನ್ನೆ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿಯಾಗಿದ್ದು ಚಿಕಿತ್ಸೆಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಮೊಟ್ಟೆ ದಾಳಿ ಪ್ರೀ ಪ್ಲ್ಯಾನ್. ಮುನಿರತ್ನ ಬೇಕು ಎಂದೇ ಮಾಡಿಸಿಕೊಂಡಿದ್ದಾರೆ. ಮೊಟ್ಟೆ ದಾಳಿ ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಏನು ಚಿಕಿತ್ಸೆ ಪಡೆದರು . ಇದೆಲ್ಲ ಮೊದಲೇ ಮುನಿರತ್ನ ಪ್ಲ್ಯಾನ್ ಮಾಡಿ ಮಾಡಿದ್ದಾರೆ ಎಂದು ಹೇಳಿದರು.
PublicNext
26/12/2024 07:47 pm