ನವದೆಹಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ಹೆಚ್ಚಾಗಿ ನೀಲಿ ಟರ್ಬನ್ ಧರಿಸುತ್ತಿದ್ದರು. ತಮ್ಮ ಟ್ರೇಡ್‌ಮಾರ್ಕ್ ನೀಲಿ ಟರ್ಬನ್‌ನ ರಹಸ್ಯವನ್ನು ಕೇಂಬ್ರಿಡ್ಜ್ ಹಳೆಯ ವಿದ್ಯಾರ್ಥಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಹಿಂದೆ ಬಹಿರಂಗಪಡಿಸಿದ್ದರು.
ವಿಶ್ವವಿದ್ಯಾನಿಲಯದಲ್ಲಿ ಅವರ "ಸ್ಮರಣೀಯ ದಿನಗಳಿಂದ" ಅವರು ತಮ್ಮ ಅಲ್ಮಾ ಮೇಟರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಬಣ್ಣವನ್ನು ಧರಿಸಿದ್ದರು ಎಂದು ಅವರು ಒಮ್ಮೆ ಹೇಳಿದ್ದರು. ಅಷ್ಟೇ ಅಲ್ಲದೆ ತಿಳಿ ನೀಲಿ ತಮ್ಮ ನೆಚ್ಚಿನ ಬಣ್ಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿಕೊಂಡಿದ್ದರು. ತನ್ನ ವಿಶ್ವವಿದ್ಯಾನಿಲಯದ ಸ್ನೇಹಿತರು ಅವರನ್ನು "ನೀಲಿ ಟರ್ಬನ್" ಎಂದು ಕರೆಯುತ್ತಿದ್ದರು ಎಂದು ಅವರು ಬಹಿರಂಗಪಡಿಸಿದ್ದರು.
ಏನಿದು ಅಲ್ಮಾ ಮೇಟರ್?
ಅಲ್ಮಾ ಮೇಟರ್ ಎರಡು ಲ್ಯಾಟಿನ್ ಪದಗಳಿಂದ ಬಂದಿದೆ. "ಪೋಷಣೆ ಅಥವಾ ಉದಾರ ತಾಯಿ". ಮೂಲತಃ ಇದನ್ನು ಪ್ರಾಚೀನ ರೋಮನ್ನರು ತಮ್ಮ ದೇವತೆಗಳನ್ನು ವಿವರಿಸಲು ಬಳಸುತ್ತಿದ್ದರು. ಆದರೆ 18ನೇ ಶತಮಾನದ ಆರಂಭದಲ್ಲಿ ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಉಲ್ಲೇಖಿಸಲು ಬಳಸಲಾಯಿತು.
PublicNext
27/12/2024 09:55 am