ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಅಧಿವೇಶನದಲ್ಲಿ ಮಹಿಳೆಯರನ್ನು ತಳ್ಳಿದ ಡಿಸಿಎಂ ಡಿಕೆಶಿ - ವಿಡಿಯೋ ಹಂಚಿಕೊಂಡು ಕಿಡಿಕಾರಿದ ಬಿಜೆಪಿ

ಬೆಳಗಾವಿ : ಬೆಳಗಾವಿಯಲ್ಲಿ ಬೃಹತ್​ ಸಮಾವೇಶವನ್ನು ಕಾಂಗ್ರೆಸ್​ ಆಯೋಜನೆ ಮಾಡಿತ್ತು. ಈ ಅಧಿವೇಶನದ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್‌ ಮಹಿಳೆಯರನ್ನ ತಳ್ಳಿದ್ದು, ಬಿಜೆಪಿ ವಿಡಿಯೋವನ್ನ ಹಂಚಿಕೊಂಡಿದೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಹಿಳೆಯರನ್ನು ತಳ್ಳಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಇದೇ ವಿಡಿಯೋವನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಎಕ್ಸ್‌ ಪೋಸ್ಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋದ ಜೊತೆಗೆ, ಇದು ಕಾಂಗ್ರೆಸ್‌ನ ಮಹಿಳಾ ಸಬಲೀಕರಣದ ಕಲ್ಪನೆ. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಗೂಂಡಾನಂತೆ ವರ್ತಿಸಿದ್ದಾರೆ ಮತ್ತು ತನ್ನ ಬಾಸ್ ಅನ್ನು ಸಮಾಧಾನಪಡಿಸಲು ಮಹಿಳಾ ಕಾಂಗ್ರೆಸ್ ಕಾರ್ಯಕರ್ತನನ್ನು ತಳ್ಳಿದ್ದಾರೆ. ಇದು ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಆದ ಅಗೌರವ, ತಮ್ಮ ಕಾರ್ಯಕರ್ತರೇ ಇಂತಹ ಅವಮಾನವನ್ನು ಎದುರಿಸಿದ್ರೆ, ಕಾಂಗ್ರೆಸ್ ಆಡಳಿತದಲ್ಲಿ ದೇಶಾದ್ಯಂತ ಮಹಿಳೆಯರು ಸುರಕ್ಷತೆಯನ್ನು ಹೇಗೆ ನಿರೀಕ್ಷಿಸುತ್ತಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಸದ್ಯ ಈ ವಿಡಿಯೋ ಕುರಿತು ಡಿಸಿಎಂ ಅವರೇ ಸ್ಪಷ್ಟನೆ ನೀಡಬೇಕಿದೆ.

Edited By : Abhishek Kamoji
PublicNext

PublicNext

27/12/2024 09:57 pm

Cinque Terre

58.05 K

Cinque Terre

14

ಸಂಬಂಧಿತ ಸುದ್ದಿ