ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಮುನಿರತ್ನಗೆ ಮೊಟ್ಟೆ ಎಸೆದ ಪ್ರಕರಣ - ಮೂವರು ಆರೋಪಿಗಳಿಗೆ ಜಾಮೀನು

ಬೆಂಗಳೂರು: ಶಾಸಕ ಮುನಿರತ್ನಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆರೋಪಿಗಳಾದ ಅಶ್ವತ್, ವಿಶ್ವಮೂರ್ತಿ ಹಾಗೂ ವಿಶ್ವಗೆ ಮೂರನೇ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.

ಈ ಸಂಬಂಧ ಮುನಿರತ್ನ ಅವರು 150 ಅನಾಮಿಕ ವ್ಯಕ್ತಿಗಳ ವಿರುದ್ಧ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ನಿನ್ನೆ ಘಟನೆ ನಡೆದ ಸ್ಥಳದಲ್ಲೆ ವಿಶ್ವಮೂರ್ತಿ, ಅಶ್ವತ್ ಹಾಗೂ ವಿಶ್ವ ಎಂಬುವರನ್ನ ಮುನಿರತ್ನ ಬೆಂಬಲಿಗರು ಥಳಿಸಿ ಪೊಲೀಸ್ರಿಗೆ ಒಪ್ಪಿಸಿದ್ದರು. ಆರೋಪಿಗಳನ್ನ ನಂದಿನಿ ಲೇಔಟ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ರು. ಆರೋಪಿಗಳ ಪರ ಹಿರಿಯ ವಕೀಲ ಸೂರ್ಯ ಮುಕುಂದರಾಜ್, ಸಂಜಯ್ ಯಾದವ್ ವಾದ ಮಂಡಿಸಿದ್ರು. ವಾದ ಆಲಿಸಿದ ನ್ಯಾಯಾಧೀಶರು ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಆರೋಪಿಗಳಿಗೆ 4500 ರೂಪಾಯಿಯ ಹಣದ ಶ್ಯೂರಿಟಿ, ಐವತ್ತು ಸಾವಿರ ಬಾಂಡ್, ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿದೆ.

Edited By : Vijay Kumar
PublicNext

PublicNext

26/12/2024 06:59 pm

Cinque Terre

43.71 K

Cinque Terre

0

ಸಂಬಂಧಿತ ಸುದ್ದಿ