ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, "ನಿಸ್ಸಂದೇಹವಾಗಿ, ಇತಿಹಾಸವು ನಿಮ್ಮನ್ನು ದಯೆಯಿಂದ ನಿರ್ಣಯಿಸುತ್ತದೆ ಡಾ. ಮನಮೋಹನ್ ಸಿಂಗ್ ಜೀ!" ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಮಲ್ಲಿಕಾರ್ಜುನ ಖರ್ಗೆ ಅವರು, 'ಜೀವಮಾನದ ಹಿರಿಯ ಸಹೋದ್ಯೋಗಿ, ಸೌಮ್ಯ ಬುದ್ಧಿಜೀವಿ ಮತ್ತು ಭಾರತದ ಆಕಾಂಕ್ಷೆಗಳನ್ನು ಸಾಕಾರಗೊಳಿಸಿದ ವಿನಮ್ರ ಚೇತನ, ಅಚಲವಾದ ಸಮರ್ಪಣಾಭಾವದಿಂದ ಉನ್ನತ ಶ್ರೇಣಿಯಲ್ಲಿ ಮೇಲೇರಿದವರು. ನಿಮ್ಮ ಅಗಲಿಕೆಯಿಂದ ನಾನು ದುಃಖಿಸುತ್ತೇನೆ' ಎಂದು ಬರೆದಿದ್ದಾರೆ.
PublicNext
26/12/2024 11:17 pm