ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಸಮರ ಸಾರಿದ್ದಾರೆ.ಅದರ ಭಾಗವಾಗಿ ಇವತ್ತು ಚಾಟಿ ತೆಗೆದುಕೊಂಡು ತಮಗೆ ತಾವೇ ಹೊಡೆದುಕೊಂಡಿದ್ದಾರೆ.ಸಹಜವಾಗಿಯೇ ಇದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.ಅವರು ಚಾಟಿಯಲ್ಲಿ ಹೊಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತದೆ.
ತಮಿಳುನಾಡಿನ ಕೊಯಮತ್ತೂರಿನ ತಮ್ಮ ಮನೆ ಮುಂದೆ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಚಾಟಿ ತೆಗೆದುಕೊಂಡು ತಮಗೆ ತಾವೇ ದಂಡಿಸಿಕೊಂಡರು.ಬರಿಮೈಯಲ್ಲಿದ್ದ ಅವರು ಪಂಚೆ ತೊಟ್ಟುಕೊಂಡು ಈ ವಿಶಿಷ್ಟ ಪ್ರತಿಭಟನೆ ದಾಖಲಿಸಿದರು.ಈ ಸಂದರ್ಭ ಅವರ ಜೊತೆಗಿದ್ದ ಕಾರ್ಯಕರ್ತರು ಕೆಲಹೊತ್ತಿನ ಬಳಿಕ ಅವರನ್ನು ತಡೆದರು. "ತಪ್ಪು ಮಾಡಿದಾಗ ನಮ್ಮನ್ನು ನಾವೇ ಹೊಡೆದುಕೊಳ್ಳುವುದು, ಶಿಕ್ಷಿಸಿಕೊಳ್ಳುವುದು, ಕಠಿಣ ಕ್ರಮ ತೆಗೆದುಕೊಳ್ಳುವುದು ತಮಿಳು ಸಂಸ್ಕೃತಿಯ ಭಾಗವಾಗಿವೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ" ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ , ಅಲ್ಲಿರುವ ಸರಕಾರವನ್ನು ಕಿತ್ತು ಹಾಕುವ ತನಕ ಪಾದರಕ್ಷೆ ಧರಿಸುವುದಿಲ್ಲ ಎಂದೂ ಶಪಥ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ ,ಜೊತೆಯಲ್ಲೇ ಟ್ರೋಲ್ ಗೂ ಒಳಗಾಗುತ್ತಿದೆ.
PublicNext
27/12/2024 02:19 pm