ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮಹಿಳೆಯರ ಜೊತೆ ಕರಿಮಣಿ ಪೋಣಿಸಿದ ರೇಣುಕಾಚಾರ್ಯ!

ಸದಾ ಸುದ್ದಿಯಲ್ಲಿ ಇರಲು ಬಯಸುವ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ, ಮದುವೆ ಮನೆಯಲ್ಲಿ ಮಹಿಳೆಯರ ಜೊತೆ ಕರಿಮಣಿ ಪೋಣಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮದುವೆ ಮನೆಗೆ ತೆರಳಿದ ರೇಣುಕಾಚಾರ್ಯ ಅವರು ವಧು-ವರರ ಪಕ್ಕದಲ್ಲಿ ಕುಳಿತು ಮಹಿಳೆಯರ ಜೊತೆ ಕರಿಮಣಿ ಪೋಣಿಸುವುದರೊಂದಿಗೆ ಅಲ್ಲಿ ನೆರೆದಿದ್ದವರಿಗೆ ಖುಷಿ ಕೊಟ್ಟಿತು.

ಹೊನ್ನಾಳಿ ತಾಲೂಕಿನ ತರಗನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾಸಡಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಹಿತ್ ಅವರ ಸಹೋದರ ಬಸವರಾಜ್ ಅವರ ಮದುವೆಗೆ ಶಾಸಕರು ಭೇಟಿ ನೀಡಿದರು‌.

ಈ ವೇಳೆ ತಾಳಿ ಪೋಣಿಸುವ ಮೂಲಕ ನವ ಜೋಡಿಗೆ ಶುಭಾಶಯ ಕೋರಿದರು‌. ತಾಳಿ ಪೋಣಿಸುವ ಮೂಲಕ ನವ ಜೋಡಿ ನೂರು ಕಾಲ ಸುಖವಾಗಿರಲೆಂದು ಆಶೀರ್ವದಿಸಿದರು.

Edited By :
PublicNext

PublicNext

21/05/2022 12:17 pm

Cinque Terre

66.78 K

Cinque Terre

10