ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 28ರಂದು ದೇಶವನ್ನು ಉದ್ದೇಶಿಸಿ ಮನ್ ಕೀ ಬಾತ್‌ನ 92ನೇ ಆವೃತ್ತಿಯಲ್ಲಿ ಮಾತನಾಡಿದ್ದಾರೆ. ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅನಾವರಣಗೊಳಿಸಿದ ತ್ರಿವರ್ಣ ಧ್ವಜ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಆ.15ಕ್ಕೆ ದೇಶದಲ್ಲೇ ಅತಿದೊಡ್ಡ 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗಿತ್ತು. ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಮೂಡಿದ ತ್ರಿವರ್ಣ ಧ್ವಜ. 204 ಅಡಿ ಉದ್ದ 630 ಅಡಿ ಅಗಲ ಇತ್ತು. ಜೊತೆಗೆ ಲಿಮ್ಕಾ ದಾಖಲೆ ಸಹ ಬರೆದಿತ್ತು. ಮೋದಿ ಈ ಕುರಿತು ತಮ್ಮ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದು, ಮೋದಿಯ ಶ್ಲಾಘನೆಗೆ ಸಂಸದ ಎಸ್. ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುಮಾರು 25ಕ್ಕೂ ಹೆಚ್ಚಿನ ಕಾರ್ಮಿಕರು ಈ ಧ್ವಜ ನಿರ್ಮಾಣ ಮಾಡಿದ್ದಾರೆ. ಒಂದಲ್ಲ ಎರಡಲ್ಲಾ ಹತ್ತಾರು ವಿಶೇಷಗಳನ್ನು ಹೊಂದಿರುವ ಈ ಬೃಹತ್ ತ್ರಿವರ್ಣ ಧ್ವಜ ಒಟ್ಟು 1.30 ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಧ್ವಜ ಮೇಲಿನ ಅಶೋಕ ಚಕ್ರ 60-60 ಅಂದರೆ 3400 ಚದರಡಿ ವಿಸ್ತೀರ್ಣ ಹೊಂದಿದೆ.
ವರದಿ : ರವಿ ಕುಮಾರ್, ಕೋಲಾರ.
PublicNext
28/08/2022 03:20 pm